ಹಾಸನ: ಕಳೆದ ತಿಂಗಳು ಪ್ರಯಾಗ್ ರಾಜ್ ನಲ್ಲಿ ಕುಂಭಮೇಳದಲ್ಲಿ ಪಾಲ್ಗೋಂಡಿದ್ದ ಪ್ರದಾನಮಂತ್ರಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದರು, ನಂತರ ಐವರು ಪೌರ ಕಾರ್ಮಿಕರ ಪಾದಪೂಜೆ ನೆರವೇರಿಸಿದ್ದರು.
ಭಾರಿ ಕುತೂಹಲ ಮೂಡಿಸಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಎ. ಮಂಜು ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಪತ್ನಿ ತಾರಾ ಜತೆಗೂಡಿ ಗ್ರಾಮ ದೇವತೆ ಹನ್ಯಾಳಮ್ಮ ದೇವತೆಗೆ ಪೂಜೆ ಸಲ್ಲಿಸಿದರು. ಬಳಿಕ ನಾಮಪತ್ರ ಸಲ್ಲಿಸಲು ಮುಂದಾದರು.
ಮಹಾವೀರ ವೃತ್ತದಿಂದ ಮೆರವಣಿಗೆ ಹೊರಟ ಅವರು, ನಿರ್ಮಲ ನಗರದ ಹಳೇ ಮಟನ್ ಪೇಟೆಯಲ್ಲಿರುವ ಪೌರಕಾರ್ಮಿಕರ ಮನೆಗಳಿಗೆ ತೆರಳಿ, ಚಂದ್ರು ಹಾಗೂ ಅಶ್ವಿನಿ ಎಂಬ ಮಹಿಳಾ ಪೌರಕಾರ್ಮಿಕರ ಪಾದ ಪೂಜೆ ಮಾಡಿದರು. ಬಳಿಕ ನಾಮಪತ್ರ ಸಲ್ಲಿಸಲು ತೆರಳಿದರು.
Comments are closed.