ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ವಿರುದ್ಧ ವಂಚನೆ, ಫೋರ್ಜರಿ ಆರೋಪ ಕೇಳಿ ಬಂದಿದ್ದು, ಹೈದರಾಬಾದ್ ಪೊಲೀಸರು ಎಫ್‍ಐಆರ್ ದಾಖಲು ಮಾಡಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿ ಫೋರ್ಜರಿ ಮಾಡಿ, ಕೇಂದ್ರ ಸರ್ಕಾರದ ಫಾರ್ಮಾ ಎಕ್ಸಿಲ್ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ಪ್ರವರ್ಣ ರೆಡ್ಡಿ ಎಂಬವರು ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ ಮುರಳಿಧರ್ ರಾವ್ ಸೇರಿದಂತೆ, 9 ಮಂದಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಪ್ರವರ್ಣ ರೆಡ್ಡಿ ಹೈದರಾಬಾದಿನ ರಿಯಲ್ ಎಸ್ಟೇಟ್ ಉದ್ಯಮಿ ಮಹಿಪಾಲ್ ಎಂಬವರ ಪತ್ನಿಯಾಗಿದ್ದಾರೆ. ತಮ್ಮ ಆರೋಪದಲ್ಲಿ 2.17 ಕೋಟಿ ರೂ. ಪಡೆದು ವಂಚನೆ ಮಾಡಿದ್ದಾಗಿ ಉಲ್ಲೇಖ ಮಾಡಿದ್ದಾರೆ. ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುರುಳೀಧರ್ ರಾವ್, ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದು ತಿಳಿಸಿ ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ.
ಸದ್ಯ ಅವರ ವಿರುದ್ಧ ಐಪಿಸಿ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ದ್ರೋಹ), ಸೆಕ್ಷನ್ 420, ಸೆಕ್ಷನ್ (ನಕಲಿ ದಾಖಲೆ), ಸೆಕ್ಷನ್ 506 (ಬೆದರಿಕೆ) ಆರೋಪದ ಅಡಿ ದೂರು ದಾಖಲಿಸಲಾಗಿದೆ.
Comments are closed.