ಕರ್ನಾಟಕ

ಬಿಜೆಪಿಯ ದೊಡ್ಡ ಮೊತ್ತದ ಕೊಡುಗೆ ಕುಮಾರಸ್ವಾಮಿಯಿಂದ ತಿರಸ್ಕಾರ: ದೇವೇಗೌಡ

Pinterest LinkedIn Tumblr


ಬೆಂಗಳೂರು: ಕರ್ನಾಟಕದಲ್ಲೀಗ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಇತ್ತ ಕಾಂಗ್ರೆಸ್​​-ಜೆಡಿಎಸ್​​​ ಮೈತ್ರಿಯಾಗಿ ಚುನಾವಣೆಗೆ ಮುಂದಾಗಿದ್ದರೇ, ಅತ್ತ ಬಿಜೆಪಿ ಏಕಾಂಗಿ ಹೋರಾಟದ ಮೂಲಕ ಚುನಾವಣೆ ಗೆಲ್ಲಲು ಶ್ರಮಿಸುತ್ತಿದೆ. ಇನ್ನು ಈ ಬಾರಿ ಚುನಾವಣೆ ಗೆಲ್ಲಲು ಒಲ್ಲದ ಮನಸ್ಸಿನಿಂದಲೇ ಜಿದ್ದಿಗೆ ಬಿದ್ದವರಂತೆ ಎಲ್ಲಾ ರಾಜಕೀಯ ಪಕ್ಷಗಳ ನಡುವೆ ಮಲ್ಲಯುದ್ಧ ನಡೆಯುವಂತೆ ಕಾಣುತ್ತಿದೆ.

ಕಣದಲ್ಲಿರುವ ಅಭ್ಯರ್ಥಿಗಳು ನೆಪ ಮಾತ್ರ. ಕುಸ್ತಿ ನಡೆಯುತ್ತಿರುವುದು ಘಟಾನುಘಟಿ ನಾಯಕರ ನಡುವೆ. ಪ್ರತಿಷ್ಠೆ ಉಳಿಸಿಕೊಳ್ಳಲು ತಂತ್ರ-ಪ್ರತಿತಂತ್ರದ ಮೂಲಕ ಚುನಾವಣೆ ಪ್ರಚಾರ ರಂಗು ಪಡೆದುಕೊಂಡಿದೆ. ಹಣದ ಹೊಳೆ ಹರಿಸಲಾಗುತ್ತಿದೆ. ತೋಳ್ಬಲವೂ ಸದ್ದು ಮಾಡುತ್ತಿದೆ. ದ್ವೇಷ ರಾಜಕಾರಣ, ವೈಯಕ್ತಿಕ ಟೀಕೆಗಳ ಕೆಸರೆರಚಾಟದ ಮೇಲಾಟಗಳಿಂದ ಮತದಾರರಿಗೆ ದಿನವೂ ‘ಪುಕ್ಕಟ್ಟೆ ಮನರಂಜನೆ’ ಉಣಬಡಿಸಲಾಗುತ್ತಿದೆ ಎನ್ನಬಹುದು.

ಇನ್ನು ಪರಸ್ಪರ ಕೆಸರೆರಚಾಟಗಳಲ್ಲಿ ತೊಡಗಿರುವ ಕಾಂಗ್ರೆಸ್​​-ಜೆಡಿಎಸ್​​​ ಮತ್ತು ಬಿಜೆಪಿ ಪಕ್ಷಗಳು ವೈಯಕ್ತಿಕ ದಾಳಿಗೆ ಮುಂದಾಗುತ್ತಿವೆ. ಹೀಗಾಗಿಯೇ ಇಂದು ಕೇಂದ್ರ ಸರ್ಕಾರ ಕಾಂಗ್ರೆಸ್​​-ಜೆಡಿಎಸ್​​​ ನಾಯಕರ ಮೇಲೆ ಐಟಿ ದಾಳಿ ಮಾಡಿಸಲಾಗಿದೆ ಎಂದು ಆರೋಪಿಸಿ ದೋಸ್ತಿ ಪಕ್ಷಗಳು ಬೀದಿಗಿಳಿದಿವೆ.

ಈ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡರು ನೀಡಿರುವ ಹೇಳಿ ಭಾರೀ ಅಚ್ಚರಿ ಮೂಡಿಸಿದೆ. ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ನೀಡಿದ್ದ ದೊಡ್ಡ ಮೊತ್ತವನ್ನು ಸಿಎಂ ಎಚ್​​​.ಡಿ ಕುಮಾರಸ್ವಾಮಿಯವರು ತಿರಸ್ಕಾರ ಮಾಡಿದ್ದರು. ಚುನವಾಣೆಯ ವೆಚ್ಚಕ್ಕಾಗಿ ಭಾರೀ ಪ್ರಮಾಣದ ಹಣವನ್ನು ಬಿಜೆಪಿ ನೀಡಲು ಮುಂದಾಗಿತ್ತು. ಮುಂಬೈನಲ್ಲಿ ಹಣ ಇಟ್ಟುಕೊಂಡು ಬಿಜೆಪಿ ಕುಮಾರಸ್ವಾಮಿ ಅವರನ್ನು ಮಾತುಕತೆಗೆ ಕರೆದಿತ್ತು. ಆದರೆ, ಬಿಜೆಪಿ ನಾಯಕರು ನೀಡಿದ ಆಮೀಷಕ್ಕೆ ಕುಮಾರಸ್ವಾಮಿ ಬಲಯಾಗಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ಇನ್ನು ಎಎನ್ಐ ಸುದ್ದಿಗೆ ನೀಡಿದ ಸಂದರ್ಶನದಲ್ಲಿ ಮಾಜಿ ಪ್ರಧಾನಿ ದೇವೆಗೌಡರು ಇಂದು, ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ಈ ಹೇಳಿಕೆ ಸುತ್ತ ಭಾರೀ ಚರ್ಚೆ ನಡೆಯುತ್ತಿದೆ. ​

Comments are closed.