ಕರ್ನಾಟಕ

ಪ್ರಧಾನಿ ನರೇಂದ್ರ ಮೋದಿ ಚೋರ್ ಹೈ ಎಂದ ಕಾಂಗ್ರೆಸ್, ಜೆಡಿಎಸ್ ಗೆ ಬಿಜೆಪಿ ತಿರುಗೇಟು

Pinterest LinkedIn Tumblr


ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷದ ಮುಖಂಡರು ಹಾಗೂ ಪ್ರತಿಪಕ್ಷ ಬಿಜೆಪಿ ಟ್ವೀಟ್ ಮೂಲಕ ಏಟು, ಎದಿರೇಟು ಮೂಲಕ ವಾಕ್ಸಮರಕ್ಕಿಳಿದಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಕೈಗೊಂಬೆಯಾಗಿ ಐಟಿ ಮುಖ್ಯಸ್ಥ ಬಾಲಕೃಷ್ಣ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ ಆರೋಪಿಸಿದ್ದರು.

ಮೋದಿ ಚೋರ್ ಹೈ, ತೊಲಗಲಿ, ತೊಲಗಲಿ ಬಿಜೆಪಿ ಎಂದು ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಐಟಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಾ ಘೋಷಣೆ ಕೂಗಿದ್ದರು.

ಬಿಜೆಪಿ ತಿರುಗೇಟು:

ವಾಸ್ತವದಲ್ಲಿ ರಾಜಕೀಯವಾಗಿ ಹಾಗೂ ಸೈದ್ಧಾಂತಿಕವಾಗಿ ವಿಭಿನ್ನ ಗುಣಗಳನ್ನು ಹೊಂದಿರುವ ಮಹಾಘಟಬಂಧನ್ ನ ಹೆಸರಿನಲ್ಲಿ ಜೆಡಿಎಸ್ , ಕಾಂಗ್ರೆಸ್ ಇದೀಗ ಭ್ರಷ್ಟಾಚಾರದ ವಿಷಯದಲ್ಲಿ ಒಂದಾಗಿದೆ.

ಭ್ರಷ್ಟಾಚಾರದ ವಿಚಾರದಲ್ಲಿಯಾದರೂ ಕೊನೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಐಟಿ ಕಚೇರಿ ಮುಂಭಾಗಕ್ಕೆ ಬರುವ ಮೂಲಕ ಎರಡೂ ಪಕ್ಷಗಳ ನಿಜ ಮುಖವಾಡ ಮತ್ತು ಸತ್ಯದ ಅನಾವರಣವಾಗಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

Comments are closed.