ಬೆಂಗಳೂರು: ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಅಂತಿಮ ಅಖಾಡದಲ್ಲಿರುವ ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳೇ ಪಾರಮ್ಯ ಮೆರೆದಿದ್ದಾರೆ.
ಅಂತಿಮ ಅಖಾಡದಲ್ಲಿರುವ ಒಟ್ಟು 241 ಅಭ್ಯರ್ಥಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 133 ಅಭ್ಯರ್ಥಿಗಳು ಪಕ್ಷೇತರರಾಗಿದ್ದಾರೆ. ಈ ಪಕ್ಷೇತರರಲ್ಲಿ 126 ಪುರುಷರು ಹಾಗೂ 7 ಮಹಿಳೆಯರು ಇದ್ದಾರೆ, ಅತಿ ಹೆಚ್ಚು ಪಕ್ಷೇತರರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಇದ್ದಾರೆ.
ಇಲ್ಲಿ ಒಟ್ಟು 31 ಮಂದಿ ಕಣದಲ್ಲಿದ್ದು, ಅದರಲ್ಲಿ 18 ಪುರುಷರು, ಒಬ್ಬರು ಮಹಿಳೆ ಸೇರಿ 19 ಮಂದಿ ಪಕ್ಷೇತರರು ಇದ್ದಾರೆ, ಉಳಿದಂತೆ, ಉಡುಪಿ-ಚಿಕ್ಕಬಳ್ಳಾಪುರದಲ್ಲಿ 4, ಹಾಸನ 2, ದಕ್ಷಿಣ ಕನ್ನಡ 7, ಚಿತ್ರದುರ್ಗ- 12, ತುಮಕೂರು 9, ಮಂಡ್ಯ 16, ಮೈಸೂರು 15, ಚಾಮರಾಜನಗರ 4, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ಕೇಂದ್ರ 13,
ಬೆಂಗಳೂರು ದಕ್ಷಿಣ 14, ಚಿಕ್ಕಬಳ್ಳಾಪುರ 6, ಕೋಲಾರದಲ್ಲಿ 6 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ. ಅಲ್ಲದೇ ಎಲ್ಲ 14 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳ 39, ರಾಜ್ಯ ಮಟ್ಟದ ಪಕ್ಷಗಳ 4, ಮಾನ್ಯತೆ ಹೊಂದಿಲ್ಲದ ಪಕ್ಷಗಳ 65 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಒಟ್ಟು 241 ಅಭ್ಯರ್ಥಿಗಳಲ್ಲಿ 15 ಮಹಿಳೆಯರಿದ್ದಾರೆ.
Comments are closed.