ಕರ್ನಾಟಕ

ಕುಮಾರಸ್ವಾಮಿಗೆ ಪುತ್ರ ನಿಖಿಲ್ ಸೋಲಿನ ಭಯ ಕಾಡಲು ಕಾರಣವೇನು?

Pinterest LinkedIn Tumblr


ಹುಬ್ಬಳ್ಳಿ: ಮಂಡ್ಯದಲ್ಲಿ ಸುಮಲತಾ ತೋರುತ್ತಿರುವ ಪ್ರಬುದ್ಧ ರಾಜಕಾರಣದಿಂದ ಹಾಗೂ ಪುತ್ರ ನಿಖಿಲ್ ಸೋಲಬಹುದು ಎಂಬ ಭಯ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಆವರಿಸಿದೆ. ಹೀಗಾಗಿ ಕುಮಾರಸ್ವಾಮಿ ಮಂಡ್ಯ ಬಿಟ್ಟು ಬೇರೆ ಕಡೆ ಪ್ರಚಾರಕ್ಕೆ ಬರುತ್ತಿಲ್ಲ. ಇನ್ನು, ಉತ್ತರ ಕರ್ನಾಟಕ ಭಾಗಕ್ಕೆ ಬರುವ ಮಾತೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು.

ಹುಬ್ಬಳ್ಳಿಯಲ್ಲಿ ಮಹಿಳಾ ಮೋರ್ಚಾದ ಸಮಾವೇಶದಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸುಮಲತಾ ಪ್ರೌಢ ರಾಜಕಾರಣಿಯಂತೆ ನಡೆಯುತ್ತಿದ್ದಾರೆ. ಅವರ ಹೇಳಿಕೆಗಳು ಪ್ರಬುದ್ಧತೆಯಿಂದ ಕೂಡಿವೆ. ಅವರಿಗೆ ಸಿಗುತ್ತಿರುವ ಜನಬೆಂಬಲವೂ ಅಪಾರವಾಗಿದೆ. ಇದು ಸಿಎಂ ಕುಮಾರಸ್ವಾಮಿ ಭಯಕ್ಕೆ ಕಾರಣವಾಗಿದೆ ಎಂದರು.

Comments are closed.