ಹಾಸನ: ಮಂಡ್ಯ ಕ್ಷೇತ್ರದ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿಯವರ ನಾಮಪತ್ರ ಕ್ರಮ ಬದ್ಧವಾಗಿಲ್ಲ ಎಂಬ ಆರೋಪ ಸುದ್ದಿಯಾಗಿ ತಣ್ಣಗಾಗುತ್ತಿದ್ದಂತೆಯೇ, ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಮಪತ್ರ ಅಪೂರ್ಣ ಮಾಹಿತಿಯಿಂದ ಕೂಡಿದೆ ಎಂಬ ದೂರಿನ ಬಗ್ಗೆ ತನಿಖೆ ನಡೆದಿದೆ.
ಈ ಬಗ್ಗೆ ಬಿಜೆಪಿ ಅಭ್ಯರ್ಥಿ ಎ. ಮಂಜು ನೀಡಿದ ದೂರನ್ನು ಆಧರಿಸಿ ಮೈಸೂರು ವಿಭಾಗೀಯ ಆಯುಕ್ತರು ಭಾನುವಾರ ತನಿಖೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಎ. ಮಂಜು, ಪ್ರಜ್ವಲ್ ನಾಮಪತ್ರ ಸಲ್ಲಿಸುವಾಗ ಆಸ್ತಿ ವಿವರದಲ್ಲಿ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಈ ಸಂಬಂಧ ಚುನಾವಣಾಧಿಕಾರಿಗೆ ದೂರು ನೀಡಿದ್ದೆವು. ಅವರು ಕ್ರಮ ಕೈಗೊಳ್ಳದೆ ನಾಮಪತ್ರ ಅಂಗೀಕರಿಸಿ ದೂರಿನ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದರು. ಈ ಸಂಬಂಧ ವಿಭಾಗೀಯ ಆಯುಕ್ತರು ವಿಚಾರಣೆ ನಡೆಸಿದರು. ಪ್ರಜ್ವಲ್, ತಾಯಿ ಭವಾನಿ ರೇವಣ್ಣ ಕಂಪನಿಯಲ್ಲಿ ಹೊಂದಿರುವ ಷೇರುಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದಿದ್ದಾರೆ.
Comments are closed.