ಮಂಡ್ಯ: ಚುನಾವಣಾ ಕಣದಲ್ಲಿ ನನ್ನನ್ನು ಮಣಿಸಲು ಮುಂದಿನ ದಿನಗಳಲ್ಲಿ ಜೆಡಿಎಸ್ ರೆಬೆಲ್ ಸ್ಟಾರ್ ಅಂಬರೀಶ್ ಕುಟುಂಬದ ತೇಜೋವಧೆಗೆ ಮುಂದಾಗಿದೆ. ಅದಕ್ಕಾಗಿ ನನ್ನ ಸಹಾಯಕರನ್ನು ಸಂಪರ್ಕಿಸಿ ವಿವಿಧ ಆಮಿಷಗಳನ್ನು ನೀಡುತ್ತಿದ್ದಾರೆ ಎಂದು ಮಂಡ್ಯ ಲೋಕಸಭೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ನ ಪ್ರಮುಖ ನಾಯಕರೊಬ್ಬರು ನನ್ನನ್ನು ಸಂಪರ್ಕಿಸಿ ನನ್ನ ವಿರುದ್ಧ ತೇಜೋವಧೆಗೆ ಕುತಂತ್ರ ನಡೆಸಿದ್ದಾರೆ ಅನ್ನುವ ವಿಚಾರವನ್ನು ಹೇಳಿದರು. ಈ ವಿಚಾರವನ್ನು ಈಗ ಹೇಳಬೇಕಾ ಅಥವಾ ಮುಂದೆ ಹೇಳಬೇಕಾ ಗೊತ್ತಾಗುತ್ತಿಲ್ಲ. ನನ್ನನ್ನು ಸಂಪರ್ಕಿಸಿದ್ದ ಟಾಪ್ ಲೀಡರ್ ಅವರು ನನ್ನ ಫೋಟೋ ಮಾರ್ಫ್ ಮಾಡಿ ಏನ್ ಬೇಕಾದರೂ ಮಾಡುವುದಕ್ಕೆ ತಯಾರಿ ನಡೆಸಿದ್ದಾರಂತೆ. ಜೆಡಿಎಸ್ ನನ್ನ ಖಾಸಗಿ ಜೀವನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಪ್ಲಾನ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಫೋಟೋ ಮಾರ್ಫ್ ಮಾಡಿರುವ ವಿಡಿಯೋಗಳನ್ನು ನೀವು ನೋಡಬಹುದೇನೋ ಎಂದರು.
ನನ್ನ ತೇಜೋವಧೆಗಾಗಿ ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವ ಇಬ್ಬರು ಹುಡುಗರನ್ನು ಸಂಪರ್ಕ ಮಾಡಿದ್ದಾರೆ. ಈ ರೀತಿಯಾಗಿ ಮಾಡಬೇಕು ಎಂದು ಹೇಳಿಕೊಟ್ಟಿದ್ದಾರೆ. ಅದಕ್ಕೆ ಅವರಿಗೆ 1 ಸೈಟ್, 15 ಲಕ್ಷ ಹಾಗೂ ವಿದೇಶಿ ಪ್ರವಾಸದ ಆಮಿಷವೊಡ್ಡಿದ್ದಾರೆ ಎಂದು ಸುಮಲತಾ ಹೇಳಿದ್ದಾರೆ.
ಇನ್ನು ಜೆಡಿಎಸ್ ಅವರ ಇಂತಹ ಕೀಳುಮಟ್ಟದ ರಾಜಕೀಯವನ್ನು ನಾನು ನೋಡಿರಲಿಲ್ಲ. ಮುಂದಿನ ದಿನಗಳಲ್ಲಿ ನನ್ನ ಫೋಟೋ ಮಾರ್ಫ್ ಮಾಡಿ ಕೆಟ್ಟದಾಗಿ ತೋರಿಸುವ ವಿಡಿಯೋಗಳು ಬರಬಹುದು. ಏನು ಬರುತ್ತೋ ಅದನ್ನು ಫೇಸ್ ಮಾಡುವುದಕ್ಕೆ ನಾನು ರೆಡಿ ಇದ್ದೇನೆ ಎಂದು ಹೇಳಿದ್ದಾರೆ.
ಕರ್ನಾಟಕ
Comments are closed.