ತುಮಕೂರು: ದೇವೇಗೌಡ ಏನು ಅನ್ನೊದನ್ನ ಮೋದಿಗೆ ತೋರಿಸ್ತೀನಿ, ನೋಡ್ತಾ ಇರಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಇಂದು ಜಿಲ್ಲೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಸವಾಲು ಹಾಕಿದ್ದಾರೆ.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಆಡಳಿತ ವ್ಯವಸ್ಥೆ ನಾಶವಾಗಲು ಮೋದಿಯೇ ಕಾರಣ. ಕಳೆದ ಲೋಕಸಭೆಯಲ್ಲಿ ನಾನು, ಚುನಾವಣೆಗೆ ನಿಲ್ಲಲ್ಲ ಅಂತ ಹೇಳಿದ್ದೆ. ಆದ್ರೆ ಆ ವಿಧಿ ಚುನಾವಣೆಗೆ ನಿಲ್ಲುವಂತೆ ಮಾಡಿತು. ದೇವೇಗೌಡರು ಏನು ಅನ್ನೋದನ್ನ ಮೋದಿಗೆ ತೋರಿಸ್ತಿನಿ. ನೋಡ್ತಾ ಇರಿ ಎಂದು ವಾಗ್ದಾಳಿ ನಡೆಸಿದರು.
ನಾನು ಯಾವಾಗಲು ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡ್ತೇನೆ. ನಾನು ನೀರಾವರಿ ಮಂತ್ರಿಯಾದಗಿನಿಂದಲೂ ಕುಡಿಯುವ ನೀರಿಗೆ ಆದ್ಯತೆ ಕೊಟ್ಟಿದ್ದೇನೆ. ನಿಮ್ಮೆಲ್ಲರ ಮುಂದೆ ಕೈ ಮುಗಿಯುತ್ತೇನೆ. ನನಗೆ ಇದೊಂದು ಪರೀಕ್ಷೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾದರೆ ನಿಮ್ಮ ಆಶಿರ್ವಾದ ಬೇಕಿದೆ. ನನ್ನನ್ನು ಆ ವಿಧಿಯೇ ಚುನಾವಣೆ ತನಕ ಎಳೆಕೊಂಡು ಬಂದಿದೆ. ದಯವಿಟ್ಟು ಚುನಾವಣೆಯಲ್ಲಿ ಬೆಂಬಲ ನೀಡಿ ಎಂದು ಹೆಚ್‍ಡಿಡಿ ಮನವಿ ಮಾಡಿಕೊಂಡರು.
Comments are closed.