ಬೆಂಗಳೂರು: ಹಿಂದೊಮ್ಮೆ ಸಚಿವ ಸ್ಥಾನ ಕೊಡದೆ ಇದ್ದರೆ ಗಂಟು ಮೂಟೆ ಕಟ್ಟಿಕೊಂಡು ಹೋಗುತ್ತೇನೆ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ವಸತಿ ಸಚಿವ ಎಂಟಿಬಿ ನಾಗರಾಜ್ ಅವರು ಈಗ ಫುಲ್ ಖುಷಿಯಾಗಿ ನಾಗಿಣಿ ನೃತ್ಯ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹೊಸಕೋಟೆಯಲ್ಲಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಎಂಟಿಬಿ, ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಹಿಂದಿಯ ನಾಗಿನ್ ಸಿನಿಮಾನದ ಸಂಗೀತಕ್ಕೆ ಸಖತ್ ಸ್ಟೆಪ್ ಹಾಕಿ ಮತದಾರರನ್ನು ಸೆಳೆಯುವ ಯತ್ನ ಮಾಡಿದ್ದಾರೆ.
1954ರಲ್ಲಿ ತೆರೆ ಕಂಡಿದ್ದ ನಾಗಿನ್ ಸಿನಿಮಾದ ಮನ್ ಢೋಲೆ, ತೇರಾ ತನ್ ಢೋಲೆ ಹಾಡಿನ ಸ್ವರಕ್ಕೆ 67 ವರ್ಷದ ನಾಗರಾಜ್ ಅವರು ಮೊದಲು ನೃತ್ಯ ಮಾಡಲು ಶುರು ಮಾಡಿದರು. ಕೈ ಮೇಲೆತ್ತಿ ಹಾವಿನ ಹೆಡೆಯಂತೆ ಆಡಿಸುತ್ತ ಸ್ಟೆಪ್ ಹಾಕಲು ಶುರು ಮಾಡಿದ ಅವರಿಗೆ ಹಲವು ಕಾರ್ಯಕರ್ತರು ಸಾಥ್ ನೀಡಿದರು. ಸುಮಾರು 10 ನಿಮಿಷಗಳ ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Comments are closed.