ಕರ್ನಾಟಕ

ದೇಶಕ್ಕಾಗಿ ಬಿಜೆಪಿಯ ಒಂದು ನಾಯಿಯೂ ಸತ್ತಿಲ್ಲ; ಮಲ್ಲಿಕಾರ್ಜುನ ಖರ್ಗೆ

Pinterest LinkedIn Tumblr


ಯಾದಗಿರಿ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರೇ ಕಾಂಗ್ರೆಸ್​ನವರು. ದೇಶಕ್ಕಾಗಿ ಬಿಜೆಪಿಯ ಒಂದು ನಾಯಿಯೂ ಸತ್ತಿಲ್ಲ. ಇಂಥವರು ನಮಗೆ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯಾದಗಿರಿಯಲ್ಲಿ ಇಂದು ಮಾತನಾಡಿರುವ ಖರ್ಗೆ, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೋದಿ ಇನ್ನೂ ಹುಟ್ಟಿರಲಿಲ್ಲ, ಆದರೆ ನಾನು ಹುಟ್ಟಿದ್ದೆ. ದೇಶದ ಸ್ವಾತಂತ್ರ್ಯದ ಬಗ್ಗೆ ಮೋದಿಗಿಂತ ಹೆಚ್ಚು ನನಗೆ ಗೊತ್ತು. ಮೋದಿ ನನಗಿಂತ ವಯಸ್ಸಿನಲ್ಲಿ ಚಿಕ್ಕವನು. ನಾನು ಕೆಲಸ ಮಾಡಿ ಮತ ಕೇಳುತ್ತಿದ್ದೇನೆ. ಬೇರೆಯವರ ತರಹ ಉಡಾಫೆಯಾಗಿ ಮತ ಕೇಳುತ್ತಿಲ್ಲ ಎಂದಿದ್ದಾರೆ.

ಇದೇವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಬಾಬುರಾವ್ ಚಿಂಚನಸೂರ, ಎ.ಬಿ. ಮಾಲಕ ರೆಡ್ಡಿ, ಉಮೇಶ್ ಜಾಧವ್ ವಿರುದ್ಧ ಹರಿಹಾಯ್ದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ನನ್ನನ್ನು ಇಂದ್ರ, ಚಂದ್ರ ಅಂದವರೇ ಇಂದು ನನ್ನನ್ನು ಬೈಯುತ್ತಿದ್ದಾರೆ. ಹಳ್ಳಿಯಿಂದ ದಿಲ್ಲಿವರಿಗೆ ನನಗೆ ಸೋಲಿಸಲು ಸಂಚು ಮಾಡುತ್ತಿದ್ದಾರೆ. ನನ್ನನ್ನು ಸೋಲಿಸಲು ಸೋತವರು ಸಂಘ ಮಾಡಿಕೊಂಡಿದ್ದಾರೆ. ಅವರೇ ಗೆದ್ದಿಲ್ಲ, ಇನ್ನು ನನ್ನನ್ನು ಸೋಲಿಸಲು ಸಾಧ್ಯವಾ? ಎಂದು ಟೀಕಿಸಿದ್ದಾರೆ.

ಕೆಲವರು ಕುಣಿದು ಕುಣಿದು ಮಾತನಾಡಬಹುದು. ಕುಣಿಯೋರಿಂದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಬಾಬುರಾವ್ ಚಿಂಚನಸೂರು ಕುರಿತು ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.

ಈ ಹಿಂದೆ ಕೂಡ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಸಾಕಷ್ಟು ಬಾರಿ ಮಲ್ಲಿಕಾರ್ಜುನ ಖರ್ಗೆ ಖಾರವಾಗೇ ವಾಗ್ದಾಳಿ ನಡೆಸಿದ್ದರು. ಸಂಸತ್​ ಒಳಗೆ ಒಂದೂ ಮಾತನಾಡದ ಮೋದಿ ಇಲಿಯಂತಿರುತ್ತಾರೆ. ಹೊರಗೆ ಹೋದಾಗ ಮಾತ್ರ ಹುಲಿಯಂತೆ ಬಿಂಬಿಸಿಕೊಳ್ಳುತ್ತಾರೆ. ಮಾಧ್ಯಮಗಳ ಮುಂದೆ ಬರಲೂ ಹೆದರುತ್ತಾರೆ ಎಂದು ಕೆಲ ದಿನಗಳ ಹಿಂದಷ್ಟೇ ಚುನಾವಣಾ ಪ್ರಚಾರದ ವೇಳೆ ಹಂಗಿಸಿದ್ದರು.

Comments are closed.