ದಾವಣಗೆರೆ: ದಂಪತಿಗಳು ಆಟೋದಲ್ಲಿ ಬರುವಾಗ ಬ್ಯಾಗ್ವೊಂದನ್ನು ಅಲ್ಲೇ ಬಿಟ್ಟು ಹೋಗಿದ್ದರು ಆ ಬ್ಯಾಗ್ಅನ್ನು ಯುಕವರ ತಂಡ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.
ವಿದ್ಯಾನಗರದ ರಾಘವೇಂದ್ರ, ರಾಜೇಶ್ ಹಾಗೂ ಪರಶುರಾಮ್ ಎಂಬುವವರಿಗೆ ಬ್ಯಾಗ್ಅನ್ನು ಠಾಣೆ ನೀಡಿದ ಯುವಕರಾಗಿದ್ದು ಬ್ಯಾಗ್ ತೆರೆದು ನೋಡದೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಬ್ಯಾಗ್ ತೆರೆದು ನೋಡಿದ್ರೆ ಒಂದು ಲಕ್ಷದ ಮೂವತ್ತು ಸಾವಿರ ಮೌಲ್ಯದ 30 ಗ್ರಾಂ ಚಿನ್ನದ ಸರ, ಎರಡು ಸಾವಿರ ನಗದು ಹಣ ದೊರೆತಿದೆ.
ಆಂಧ್ರಪ್ರದೇಶದ ಅನಂತಪುರಂನ ಶ್ರೀನಾಥ್ ಮತ್ತು ಅಂಜನಾ ದಂಪತಿಗಳು ಆಟೋದಲ್ಲಿ ಬರುವಾಗ ಬ್ಯಾಗ್ಅನ್ನು ಕಳೆದುಕೊಂಡಿದ್ದರು. ಅದೇ ವೇಳೆ ಬ್ಯಾಗ್ ಕಳೆದಿದೆ ಎಂದು ಠಾಣೆಗೆ ದೂರು ನೀಡಲು ದಂಪತಿಗಳಿಬ್ಬರು ಬಂದಿದ್ದರು.
ಇನ್ನು ತಾವು ದೂರು ಕೊಡಲು ಬಂದಾಗ ಠಾಣೆಯಲ್ಲಿ ಬ್ಯಾಗ್ ಕಂಡು ಆಶ್ಚರ್ಯಗೊಂಡ ದಂಪತಿ. ಯುವಕರು ಪೊಲೀಸರಿಗೆ ಬ್ಯಾಗ್ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದನ್ನು ಕಂಡು ದಂಪತಿಗಳು ಭಾವುಕರಾದರು. ಸದ್ಯ ಯುವಕರ ಈ ಕಾರ್ಯಕ್ಕೆ ವಿದ್ಯಾನಗರ ಪೊಲೀಸರು ಪ್ರಶಂಸೆ ಮಾಡಿದ್ದಾರೆ.
Comments are closed.