ಕರ್ನಾಟಕ

ನಾನು 3 ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಲು ನೆರವಾದ ಎಲ್ಲ ಮತದಾರರಿಗೆ ಧನ್ಯವಾದ: ತೇಜಸ್ವಿ ಸೂರ್ಯ

Pinterest LinkedIn Tumblr


ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ, ಮತ್ತೈದು ವರ್ಷ ಮೋದಿ ಪ್ರಧಾನಿ ಎಂದು ಹೇಳಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ನೀಡಿದ ಮೋದಿಯವರಿಗೆ, ಅಮಿತ್ ಶಾ, ಯಡಿಯೂರಪ್ಪನವರಿಗೆ ಧನ್ಯವಾದಗಳು.

ನನಗೆ ಮೂರು ಲಕ್ಷ ಲೀಡ್ ಕೊಟ್ಟ ಎಲ್ಲ ಮತದಾರರಿಗೆ ಧನ್ಯವಾದ. ಸತತ 6 ಬಾರಿ ಈ ಕ್ಷೇತ್ರ ಪ್ರತಿನಿಧಿಸಿ ರಾಜ್ಯದ ಪರ ಇದ್ದ ನನ್ನ ಗುರು ದಿವಂಗತ ಅನಂತ್ ಕುಮಾರ್, ವಿಜಯ್ ಕುಮಾರ್ ಸೇರಿದಂತೆ ಎಲ್ಲ ಕಾರ್ಯಕರ್ತರಿಗೆ ಈ ಗೆಲುವು ಅರ್ಪಣೆ ಎಂದು ಹೇಳಿದ್ದಾರೆ.

ಅಲ್ಲದೇ, ಇಲ್ಲಿನ ಎಲ್ಲ ಹಿರಿಯ ನಾಯಕರಿಗೂ ಧನ್ಯವಾದಗಳು. ಮಾಜಿ ಡಿಸಿಎಂ ಆರ್. ಅಶೋಕ್ , ವಿ. ಸೋಮಣ್ಣ, ರವಿಸುಬ್ರಮಣ್ಯ,ಸತೀಷ್ ರೆಡ್ಡಿ, ಉದಯ್ ಗರುಡಾಚಾರ್ ಅವ್ರಿಗೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

Comments are closed.