ಮೈಸೂರು: ಮೈಸೂರಿನಲ್ಲಿಂದು ಸಂಪುಟ ಪುನರಚನೆ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಂಪುಟ ಪುನರ್ ರಚನೆ ಅಲ್ಲ, ವಿಸ್ತರಣೆ ರೀತಿ ಆಗುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ತುಂಬುವ ಕೆಲಸ ಆಗುತ್ತಿದೆ. ಆದ್ರೆ ಹಿರಿಯರಿಗೆ ಕೋಕ್ ಕೊಟ್ಟು, ಹೊಸಬರನ್ನು ಸೇರಿಸಿಕೊಳ್ಳುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನು ಲೋಕಸಭಾ ಚುನಾವಣೆಯಲ್ಲಿ ಲೀಡ್ ಕಡಿಮೆ ಬಂದಿದ್ದಕ್ಕೆ ಧೃವನಾರಾಯಣ್ ಸೋಲಿಗೆ ಸ್ವಪಕ್ಷಿಯರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಪುಟ್ಟರಂಗಶೆಟ್ಟಿಯನ್ನು ಕುರಿತು, ಏನಯ್ಯ ನಿಮ್ಮ ಭಾಗದಲ್ಲಿ ಲೀಡ್ ಕಡಿಮೆ ಬಂದಿದೆಯಂತಲ್ಲ. ಹಿಂಗೆ ಮಾಡಿದ್ರೆ ಹೆಂಗಯ್ಯ.!? ಎಂದು ಸಿಡಿಮಿಡಿಗೊಂಡಿದ್ದಾರೆ.
ಸಿದ್ದರಾಮಯ್ಯ ಸಿಟ್ಟಾಗಿದ್ದಕ್ಕೆ ಪುಟ್ಟರಂಗಶೆಟ್ಟಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಸಿದ್ದರಾಮಯ್ಯ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
Comments are closed.