ಕರ್ನಾಟಕ

ಕಾವೇರಿ ನೀರು ಬಿಡುವ ಕುರಿತು ಜಲ ಸಂಪನ್ಮೂಲ ಸಚಿವ ಡಿಕೆಶಿ ಹೇಳಿದ್ದೇನು..?

Pinterest LinkedIn Tumblr


ಬೆಂಗಳೂರು: ಕಾವೇರಿಯಿಂದ ತಮಿಳುನಾಡಿಗೆ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದು, ಪ್ರಾಧಿಕಾರ ಕೊಟ್ಟ ತೀರ್ಪಿನ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ಪ್ರಾಧಿಕಾರದ ತೀರ್ಪಿಗೆ ಗೌರವ ಕೊಡುತ್ತೇವೆ ಎಂದು ಹೇಳಿದ್ದಾರೆ.

ಅಲ್ಲದೇ, ನೀರಿನ ಒಳ ಹರಿವು ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ನಮ್ಮದೇನೂ ತಕರಾರಿಲ್ಲ. ಒಳಹರಿವು ಬರುತ್ತದೆ ಎಂಬ ವಿಶ್ವಾಸವಿದೆ. ಏನಾದ್ರೂ ಎಮರ್ಜೆನ್ಸಿ ಆಗಿ ನೀರಿಲ್ಲ ಅಂದರೆ ಆಲ್ ಪಾರ್ಟಿ ಮೀಟಿಂಗ್ ಮಾಡಿ ನಿರ್ಧಾರ ತೆಗೆದುಕೊಳ್ತೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತು ಮುಂದುವರಿಸಿದ ಡಿ.ಕೆ.ಶಿವಕುಮಾರ್, ರಾಜ್ಯದ ಹಿತ ನ್ಯಾಯಾಲಯದ ಹಿತ ಎರಡನ್ನೂ ಕಾಯುತ್ತೇವೆ. ಬಿಜೆಪಿ ಸಂಸದರ ಧ್ವನಿ ಶಕ್ತಿ ಹೇಗಿದೆ ನೊಡೋಣ. ಹಿಂದೆ ಬಿಜೆಪಿಯವರು ಸಂಸತ್‌ನಲ್ಲಿ ಮಾತಾಡಿದ್ದಾರೆ. ಈಗಷ್ಟೇ ಕೇಂದ್ರದಲ್ಲಿ ಸರ್ಕಾರ ರಚನೆಯಾಗುತ್ತಿದೆ. ನೋಡೋಣ ಏನೇನಾಗುತ್ತದೆ ಎಂದು ಹೇಳಿದ್ದಾರೆ.

Comments are closed.