ದೆಹಲಿ: ಮಂಡ್ಯ ಲೋಕಸಭಾ ಸಂಸದೆ ಸುಮಲತಾ ಅವರಿಗೆ ಸಚಿವ ಸ್ಥಾನ ಸಿಗಬಹುದಾ ಎಂಬ ಮಾಧ್ಯಮದವರ ಪ್ರಶ್ನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು, ಅವರು ಪಕ್ಷಕ್ಕೆ ಸೇರಿಲ್ಲ ಹಾಗಾಗಿ ಅವರಿಗೆ ಸಚಿವ ಸ್ಥಾನ ಕೊಡುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದ್ದಾರೆ.
ನವದೆಹಲಿಯ ಕರ್ನಾಟಕ ಭವನದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, 25 ಸಂಸದರು ಇರುವ ಕರ್ನಾಟಕಕ್ಕೆ ಉತ್ತಮ ಸಚಿವ ಸ್ಥಾನ ಸಿಗುತ್ತೆ ಎಂಬ ನಂಬಿಕೆ ಇದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ಮುಖ್ಯಮಂತ್ರಿ ಸ್ಟಾರ್ ಹೋಟೆಲ್ನಲ್ಲಿ ಇದ್ದು ವ್ಯಾಪಾರ ಮಾಡುತ್ತಿದ್ದರು. ಈಗ ಸಿಎಂ ಸರ್ಕಾರಿ ಬಂಗಲೆಗೆ ಬಂದಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಇದೆಯಾ ಎಂದು ಬಿಎಸ್ ಯಡಿಯೂರಪ್ಪನವರು ಪ್ರಶ್ನೆ ಮಾಡುವ ಮೂಲಕ ದೋಸ್ತಿ ಸರ್ಕಾರವನ್ನು ಕಾಲೆಳೆದಿದ್ದಾರೆ.
ಇನ್ನು ಗೋಕಾಕ್ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಜೊತೆ ನಾನು ಸಂಪರ್ಕದಲ್ಲಿ ಇದೆ. “ಮೂರು ತಿಂಗಳಿಂದ ರಮೇಶ್ ಜಾರಕಿಹೊಳಿ ಇದೆ ಕಥೆ ಹೇಳ್ತಿದ್ದಾರೆ” ನಾವು ಅವರನ್ನು ನಂಬುವುದಿಲ್ಲ ವಿರೋಧ ಪಕ್ಷದಲ್ಲಿ ಕೂತು ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಡಿ.ಕೆ ಶಿವಕುಮಾರ್ ಸಚಿವ ಸ್ಥಾನ ಬಿಟ್ಟು ಕೊಟ್ಟರೆ ನೋಡೋಣ. ಇಷ್ಟೊಂದು ದಾರಳ ಆದರೆ ಅವರು ನಾವು ಆವಾಗ ಯೋಚನೆ ಮಾಡೋ ಅವಶ್ಯಕತೆನೇ ಇಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
Comments are closed.