ಬೆಂಗಳೂರು: ಮಾಜಿ ಸಚಿವ, ಮಂಡ್ಯದ ಗಂಡು, ರೆಬೆಲ್ ಸ್ಟಾರ್ ದಿವಗಂತ ಅಂಬರೀಶ್ ಅವರ ಜನ್ಮದಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಟ್ವಿಟರ್ ಮಾಡುವ ಮೂಲಕ ಸ್ಮರಿಸಿದ್ದಾರೆ.
‘ಅಂಬರೀಷ್ ಹಾಗೂ ನನ್ನ ಸ್ನೇಹ ಮರೆಯಲಾಗದಂತಹದ್ದು. ಸದಾ ಜನರ ಜೊತೆ ಬೆರೆತ, ಸಮುದಾಯದ ಏಳಿಗೆಯ ಬಗ್ಗೆ ಚಿಂತಿಸಿದ ಗೆಳೆಯನ ಜನ್ಮ ದಿನ ಇಂದು. ಅಂಬರೀಷ್ ಅವರ ಉದಾತ್ತ ಮನಸ್ಸು ಎಲ್ಲರಿಗೂ ದಕ್ಕಲಿ ಎಂದು ಹಾರೈಸುತ್ತೇನೆ’ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಬರೆದುಕೊಂಡಿದ್ದಾರೆ.
ಮೇ 29, ದಿವಗಂತ ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಹುಟ್ಟುಹಬ್ಬ. ಹೀಗಾಗಿ ಚಂದನವನ ಪ್ರಮುಖರು, ರಾಜಕಾರಣಿಗಳು ಹಾಗೂ ಅಭಿಮಾನಿಗಳು ಅಂಬರೀಶ್ ಅವರನ್ನು ಸ್ಮರಿಸಿದ್ದಾರೆ.
ಇನ್ನು ನಗರದ ಕಂಠೀರವ ಸ್ಟುಡಿಯೋನಲ್ಲಿರುವ ಅವರ ಸ್ಮಾರಕ ಬಳಿ ಅವರ ಅಭಿಮಾನಿಗಳ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಅವರಿಗೆ ವಿಶೇಷವಾದ ಗೌರವ ಸಲ್ಲಿಸಿದ್ದಾರೆ.
Comments are closed.