ಕರ್ನಾಟಕ

ಹೆಂಡತಿಯ ಹತ್ಯೆ ಮಾಡಿ ಗಂಡ ಪರಾರಿ

Pinterest LinkedIn Tumblr


ಹನಗೋಡು: ಹನಗೋಡು ಹೋಬಳಿ ರಾಮೇನಹಳ್ಳಿಯಲ್ಲಿ ಸೋಮವಾರ ಪತಿಯೇ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿ ತಂದೆಯ ವಿರುದ್ಧ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಸುಂದರಮ್ಮ(41) ಕೊಲೆಯಾದವರು. ಆರೋಪಿ ಕಂಚೀಗೌಡ ನಾಪತ್ತೆಯಾಗಿದ್ದಾನೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಅಮ್ಮನ ಮೇಲೆ ಅನುಮಾನ ವ್ಯಕ್ತಪಡಿಸುತ್ತಲೇ ಇದ್ದ ಅಪ್ಪ ಆಗಾಗ್ಗೆ ಜಗಳ ಮಾಡುತ್ತಿದ್ದನು. ಆತನ ಕಿರುಕುಳ ತಾಳಲಾರದೆ ಅಮ್ಮ ಪಿ.ಯು.ಸಿ.ವರೆಗೆ ಓದಿರುವ ಅಕ್ಕನ ಜತೆ ಬೆಂಗಳೂರಿಗೆ ತೆರಳಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ದುಡಿಮೆಯ ಸಂಪಾದನೆಯಲ್ಲೇ ನಾನು ಮೈಸೂರಿನ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿದ್ದೇನೆ. ಹಬ್ಬ ಹರಿದಿನಗಳಲ್ಲಿ ಮಾತ್ರ ರಾಮೇನಹಳ್ಳಿಗೆ ಬಂದು ಹೋಗುತ್ತಿದ್ದೆವು ಎಂದು ಪುತ್ರಿ ದೂರಿನಲ್ಲಿ ತಿಳಿಸಿದ್ದಾಳೆ.

ಅಂತೆಯೆ, ಮಾರಮ್ಮನ ಹಬ್ಬಕ್ಕೆಂದು ಕಳೆದ ಶನಿವಾರ ಅಮ್ಮ ರಾಮೇನಹಳ್ಳಿಗೆ ಬಂದಿದ್ದರು. ಸೋಮವಾರ ಬೆಳಗ್ಗೆ ಅನೇಕ ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಪಕ್ಕದ ಮನೆಯವರಿಗೆ ಕರೆ ಮಾಡಿ ವಿಷಯ ಹೇಳಿದೆ. ಅವರು ಮನೆ ಬಳಿಗೆ ಹೋಗಿ ನೋಡಿ, ಅಮ್ಮ ಮಕಾಡೆ ಬಿದ್ದಿರುವುದಾಗಿ ಮಾಹಿತಿ ನೀಡಿದರು. ಗಾಬರಿಯಿಂದ ಊರಿಗೆ ಬಂದು ನೋಡಿದಾಗ ಸಾವಿನ ವಿಷಯ ತಿಳಿಯಿತು. ಈ ವೇಳೆ ಅಪ್ಪ ನಾಪತ್ತೆಯಾಗಿದ್ದರಿಂದ ಆತನೇ ಕೊಲೆ ಮಾಡಿರುವ ಬಗ್ಗೆ ಅನುಮಾನವಿದೆ ಎಂದು ಹೇಳಿದ್ದಾಳೆ.

ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Comments are closed.