ಕರ್ನಾಟಕ

ಇರುವ ಒಂದು ಸಚಿವ ಸ್ಥಾನದ ಹಂಚಿಕೆಗೆ ಜೆಡಿಎಸ್‌ನಲ್ಲಿ ಹಗ್ಗಜಗ್ಗಾಟ..!?

Pinterest LinkedIn Tumblr


ಬೆಂಗಳೂರು: ಜೆಡಿಎಸ್‌ನಲ್ಲಿ ಈಗ ಇರುವ ಒಂದು ಸಚಿವ ಸ್ಥಾನವನ್ನ ಯಾರಿಗೆ ಕೊಡಬೇಕೆಂಬ ಗೊಂದಲ ಉಂಟಾಗಿದೆ.

ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಈ ಬಗ್ಗೆ ಗೊಂದಲ ಉಂಟಾಗಿದ್ದು, ಎಂಎಲ್‌ಎಗೆ ಸಚಿವ ಸ್ಥಾನ ಕೊಡಬೇಕಾ, ಇಲ್ಲಾ ಎಂಎಲ್‌ಸಿಗೆ ಸಚಿವ ಸ್ಥಾನ ಹಂಚಿಕೆ ಮಾಡಬೇಕಾ ಅನ್ನೋ ಕನ್‌ಫ್ಯೂಷನ್ ಈಗ ಉಂಟಾಗಿದೆ.
ಎಂ.ಬಿ.ಫಾರೂಕ್ ಪ್ರಸ್ತುತ ವಿಧಾನಪರಿಷತ್ ಸದಸ್ಯರಾಗಿದ್ದು, ಫಾರೂಕ್‌ಗೆ ಸಚಿವ ಸ್ಥಾನ ಕೈ ತಪ್ಪಿದ್ರೂ ಸಮಸ್ಯೆ ಇರಲ್ಲ .ಆದ್ರೆ ಇವರನ್ನು ಬಿಟ್ಟು, ಹೆಚ್ ಕೆ ಕುಮಾರಸ್ವಾಮಿ, ಸತ್ಯ ನಾರಾಯಣ, ಅನ್ನದಾನಿ ಸಚಿವಾಕಾಂಕ್ಷಿಗಳಿದ್ದಾರೆ.

ಇನ್ನು ಸಚಿವ ಸ್ಥಾನದ ರೇಸ್‌ನಲ್ಲಿ ಅನ್ನದಾನಿ ಇದ್ದು, ಅನ್ನದಾನಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ.

Comments are closed.