ಕರ್ನಾಟಕ

ದೇವೇಗೌಡರು ಸೋತಿರುವ ಕುರಿತು ವಿ. ಶ್ರೀನಿವಾಸ್​ ಪ್ರಸಾದ್​ ಬಿಚ್ಚಿಟ್ಟ ಸತ್ಯ!

Pinterest LinkedIn Tumblr


ಚಾಮರಾಜನಗರ: ಪರಸ್ಪರ ಅಸಮಾಧಾನ ತೋಡಿಕೊಂಡಿರೋದು ಇದೆ ಮೊದಲಲ್ಲ ಬಿಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ದೊಡ್ಡಗೌಡರ ನಡುವಿನ ಅಸಮಾಧಾನ ಬಗ್ಗೆ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್​ ಹೇಳಿದರು.

ಚಾಮರಾಜನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕೃತಜ್ಞತಾ ಸಮಾರಂಭಕ್ಕೆ ಆಗಮಿಸಿದ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಚುನಾವಣೆಗೂ ಮೊದಲೇ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಅಸಮಾಧಾನ ತೋಡ್ಕೊಂಡಿದ್ದರು ಎಂದು ಅವರು ತಿಳಿಸಿದರು.

ಸದ್ಯ ಅದೆಲ್ಲ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಿದೆ. ದೋಸ್ತಿ ಎಷ್ಟರ ಮಟ್ಟಿಗೆ ನಡೆದುಕೊಂಡು ಬರುತ್ತಿದೆ. ಇದೆಲ್ಲದರ ಫಲಿತಾಂಶದ ಫಲವಾಗಿ ದೇವೇಗೌಡರೂ ಮನೆಗೋದರು ಎಂದರು.

ಇನ್ನು ಮಂಡ್ಯದ ಫಲಿತಾಂಶ, ರಾಜ್ಯದ ಫಲಿತಾಂಶ ಏನಾಗಿದೆ ಅಂತಾ ಇದರಿಂದಲೇ ಗೊತ್ತಾಗುತ್ತೆ ದೋಸ್ತಿ ಸರ್ಕಾರ ಎಷ್ಟರಮಟ್ಟಿಗೆ ಇದೆ ಅಂತಾ ಜನ ಇವರನ್ನು ಮೂಕ ಪ್ರೇಕ್ಷಕರಾಗಿ ನೋಡ್ತಾ ಇದ್ದಾರೆ ಎಂದು ಅವರು ನುಡಿದರು.

ಅಷ್ಟೇ ಅಲ್ಲದೇ ನನಗೆ ಚುನಾವಣೆನೇ ಬೇಡ ಅಂತಿದ್ದೆ. ಮಂತ್ರಿಗಿರಿಗೆ ಏಕೆ ಆಸೆ ಪಡಲಿ. ಎಲ್ಲರ ಒತ್ತಾಯದ ಮೇರೆಗೆ ಕೊನೆಯ ಗಳಿಗೆಯಲ್ಲಿ ಚುನಾವಣೆಗೆ ನಿಲ್ಲಬೇಕಾಯಿತು. ನನಗೆ ಯಾವುದೇ ಆಸೆ ಇಲ್ಲ ಎಂದು ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯೆ ನೀಡಿದರು.

Comments are closed.