ಮಂಡ್ಯ: ಚುನಾವಣೆ ಸಂದರ್ಭದಲ್ಲಿ ನಾನು ಯಾರ ಬಗ್ಗೆ ಕೂಡ ಕೀಳಾಗಿ ಮಾತನಾಡಿಲ್ಲ, ಈಗಲೂ ಸಹ ನಾನು ಯಾರ ಬಗ್ಗೆ ಸಹ ಮಾತನಾಡಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದರು.
ಮಂಡ್ಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಕ್ಕರೆ ನಾಡಿನ ಸಂಸದೆ, ನನಗೆ ಜನ ಜವಾಬ್ದಾರಿ ಕೊಟ್ಟಿದ್ದಾರೆ. ಕೆಲಸ ಮಾಡಿಕೊಂಡು ಹೋಗ್ತೀನಿ. ಬರ, ನೀರಿನ ಸಮಸ್ಯೆ ಹೆಚ್ಚಿದೆ. ಅದನ್ನು ಬಗೆ ಹರಿಸುವತ್ತ ಗಮನ ಹರಿಸಬೇಕು. ರಾಜಕಾರಣ ಮಾಡೋ ಸಮಯ ಅಲ್ಲ, ಟೀಕೆಗಳಿಗೆ ಉತ್ತರ ಕೊಡುತ್ತಾ ಕಾಲಹರಣ ಮಾಡಲ್ಲ ಎಂದು ಅವರು ನುಡಿದರು.
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುಮಲತಾ ಅಂಬರೀಶ್, ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಅವರ ಕೆಲಸವನ್ನ ಅವರು ಮಾಡುತ್ತಿದ್ದಾರೆ ಎಂದರು.
ಸದ್ಯ ಮಂಡ್ಯದಲ್ಲಿ ಈಗಾಗಲೇ ನನ್ನ ಮನೆ ಇದೆ. ಪ್ರತಿ ತಾಲ್ಲೂಕಿಗೂ ಭೇಟಿ ಕೊಡ್ತೀನೆ. ವಾರಕ್ಕೆ ಮೂರು ದಿನ ಮಂಡ್ಯದಲ್ಲೇ ವಾಸ್ತವ್ಯ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಸುಮಲತಾ ಅವರು ಸಾಮಾನ್ಯ ಜನರ ಫೋನ್ ಪಿಕ್ ಮಾಡಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಸಭೆಗಳು ಅಥವಾ ದೆಹಲಿಯಲ್ಲಿ ಇದ್ದಾಗ ಫೋನ್ ಪಿಕ್ ಮಾಡಿಲ್ಲ. ಮುಂದೆ ಮಂಡ್ಯದಲ್ಲಿ ಕಚೇರಿ ಮಾಡಿ ಜನರ ಸಮಸ್ಯೆ ಆಲಿಸಲು ಸಿಬ್ಬಂದಿ ನೇಮಕ ಮಾಡ್ತೀನಿ ಎಂದು ಅವರು ಹೇಳಿದರು.
ಸುಮಲತಾ ಬಿಜೆಪಿ ಅಥವಾ ಕಾಂಗ್ರೆಸ್ ಸೇರುವ ಬಗ್ಗೆಯು ಸಹ ಮಾಡತನಾಡಿದ ಅವರು, ನಾನು ನಾನಾಗೇ ಇರ್ತೀನಿ. ಜನರ ಪರ ಇರ್ತೀನಿ ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಷ್ಟನೆ ಕೊಟ್ಟರು.
Comments are closed.