ಕರ್ನಾಟಕ

ನಿಮ್ಮ ಸ್ಮಾರ್ಟ್​ಫೋನ್​ ಕೂಡ ಹೀಗಾಗಬಹುದು

Pinterest LinkedIn Tumblr


ಸ್ಮಾರ್ಟ್​ಫೋನ್​ ಅನ್ನು ನಿತ್ಯವೂ ಚಾರ್ಜ್​ ಮಾಡುವ ಅಭ್ಯಾಸವಿದೆಯೇ.? ಹಾಗಿದ್ದರೆ ಈ ಸ್ಟೋರಿ ನೋಡಲೇ ಬೇಕು. ಸಾಕಷ್ಟು ಜನರು ಮಲಗುವ ಮುನ್ನ ತಮ್ಮ ಸ್ಮಾರ್ಟ್​ಪೋನ್​ ಅನ್ನು ಚಾರ್ಜ್​ಗೆ ಹಾಕುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಇಂತಹ ಅಭ್ಯಾಸದಿಂದ ಸ್ಮಾರ್ಟ್​ಫೋನ್​ಗಳು ವಿಪರೀತ ಚಾರ್ಜ್​ ಆಗಿ ಸ್ಫೋಟಗೊಂಡ ಪ್ರಸಂಗವನ್ನು ಕೇಳಿರುತ್ತೇವೆ. ಇನ್ನು ಕೆಲವೊಮ್ಮೆ ಸ್ಮಾರ್ಟ್​ಫೋನ್​ಗಳ ದೋಷದಿಂದಾಗಿ ಸ್ಫೋಟಗೊಂಡಿವೆ. ಹಾಗಾಗೀ ಸ್ಮಾರ್ಟ್​ಫೋನ್​ ಸ್ಫೋಟಗೊಳ್ಳಲು ನಿರ್ದಿಷ್ಟ ಕಾರಣವೇನು? ಯಾವ ಸಂದರ್ಭದಲ್ಲಿ ಫೋನ್​ಗಳು ಸ್ಫೋಟಗೊಳ್ಳುತ್ತವೆ? ಇಲ್ಲಿದೆ ಮಾಹಿತಿ.

ಸ್ಮಾರ್ಟ್​ಫೋನ್​ ಚಾರ್ಜ್​ ಮಾಡುವ ವೇಳೆ ಬ್ಯಾಕ್​ ಕವರ್​ ಅನ್ನು ತೆಗೆಯಿರಿ. ಚಾರ್ಜ್​ ವೇಳೆ ಬ್ಯಾಟರಿಗಳು ಬಿಸಿಯಾಗುವುದರಿಂದ ಫೋನ್​ ಸ್ಟೋಟಗೊಳ್ಳುವ ಸಂದರ್ಭ ಹೆಚ್ಚಾಗಿರುತ್ತದೆ.
ನಿಮ್ಮ ಸ್ಮಾರ್ಟ್​ಫೋನ್​ಗೆ ಅದರದ್ದೇ ಆದ ಚಾರ್ಜರ್​ನಿಂದ ಚಾರ್ಜ್​ ಮಾಡಿ. ನಕಲಿ ಚಾರ್ಜರ್​ಗಳಿಂದ ವಿದ್ಯುತ್​​ ಪ್ರವಾಹ ಏರಿತವಾಗಿ ಸ್ಮಾರ್ಟ್​ಫೋನ್​ ಸ್ಫೋಟಗೊಳ್ಳಬಹುದು. ಅಂತಹ ಚಾರ್ಜರ್​​ನಿಂದ ನಿಮ್ಮ ಸ್ಮಾರ್ಟ್​ಫೋನ್​ಗಳು ಬೇಗ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಗೂಗಲ್​ನಲ್ಲಿ ದೊರೆಯುವ ಥರ್ಡ್​ ಪಾರ್ಟಿ ಆ್ಯಪ್​ ಬಳಸುವುದರಿಂದ ಇಂತಹ ಸಮಸ್ಯೆ ಎದುರಾಗಬಹುದು. ಥರ್ಡ್​ ಪಾರ್ಟಿ ಆ್ಯಪ್​ಗಳು ಬಳಕೆದಾರನಿಗೆ ಇನ್ನಿತರ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡುವಂತೆ ಮನವಿ ಮಾಡುತ್ತದೆ. ಇದರಿಂದ ನಿಮ್ಮ ಸ್ಮಾರ್ಟ್​ಫೋನ್​​​​ ಮೇಲೆ ಪರಿಣಾಮವನ್ನು ಬೀರುತ್ತದೆ.
ಸ್ಮಾರ್ಟ್​ಫೋನ್​ ಅನ್ನು 80%ಶೇಕಡಾದಷ್ಟು ಚಾರ್ಜ್​ ಮಾಡಿ. ಪದೇ-ಪದೇ ಚಾರ್ಜ್​ ಮಾಡುವುದರಿಂದ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ.
ಪವರ್​ ಬ್ಯಾಂಕ್​​ ಬಳಸುವಾಗ ಎಚ್ಚರವಿರಲಿ. ನಕಲಿ ಪವರ್​ ಬ್ಯಾಂಕ್​​ಗಳಿಂದ ವಿದ್ಯುತ್​​ ಪ್ರವಾಹ ಏರಿತವಾಗಿ ಶಾರ್ಟ್​ ಸರ್ಕ್ಯೂಟ್​​, ಸ್ಮಾರ್ಟ್​ಫೋನ್​ ಬಿಸಿಯಾಗುವ ಸಮಸ್ಯೆ ಎದುರಾಗುತ್ತದೆ. ಹಾಗಾಗೀ, ಕಂಪೆನಿ ಪವರ್​ ಬ್ಯಾಂಕ್​ಗಳನ್ನು ಬಳಸಿಕೊಳ್ಳಿ.
ಕೆಲ ಸ್ಮಾರ್ಟ್​ಫೋನ್​​ಗಳು ಫಾಸ್ಟ್​ ಚಾರ್ಜಿಂಗ್​ ತಂತ್ರಜ್ನಾನವನ್ನು ಹೊಂದಿದೆ. ಫಾಸ್ಟ್​​ ಚಾರ್ಜರ್​ ಹೈ ವೋಲ್ಟೇಜ್​ ಸರಬರಾಜಾಗುವುದರಿಂದ ಬ್ಯಾಟರಿ ಬೇಗ ಬಿಸಿಯಾಗುವ ಸಾಧ್ಯತೆ ಇದೆ. ​

Comments are closed.