ಬೆಂಗಳೂರು: ಐಎಂಎ ಜ್ಯುವೆಲ್ಲರ್ಸ್ ಜೊತೆಗೆ ನನಗೆ ನಂಟಿದೆ ಎಂಬ ಆರೋಪ ಸಾಬೀತಾದರೇ ನಾನು ರಾಜಕೀಯ ತೊರೆಯುತ್ತೇನೆ ಎಂದು ಅಲ್ಪಸಂಖ್ಯಾತ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಮೀರ್, ತಮ್ಮ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಸಾಬೀತಾದರೇ ರಾಜಕೀಯ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. ಜೊತೆಗೆ ವಿಶೇಷ ತನಿಖಾ ತಂಡಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಆಸ್ತಿ ಖರೀದಿಸಿದ ಬಳಿಕ ಹಣವನ್ನು ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮಾಡಿದ್ದಾರೆ. ಜನತಾ ಕೋ-ಆಪರೇಟಿವ್ ಬ್ಯಾಂಕ್ ಖಾತೆಗೆ ಹಾಕಿದ್ದಾರೆ ಎಂದು ಅವರು ನುಡಿದರು.
ಇನ್ನು ಎಲ್ಲವೂ ಪಾರದರ್ಶಕವಾಗಿ ವಹಿವಾಟು ನಡೆದಿದೆ. ನನ್ನ ಮಾರಾಟ ಮಾಡಿದ ನಿವೇಶನವು ರಿಚ್ಮಂಡ್ ಟೌನ್ನಲ್ಲಿರುವುದು. ಅದು ನನ್ನ ಆಸ್ತಿ, ಐಎಂಎಗೆ ಮಾರಾಟ ಮಾಡಿದ್ದೇನೆ ಎಂದರು.
ಸದ್ಯ ನಾನು ಐಎಂಎ ಜುವೆಲರ್ಸ್ ಜೊತೆ ಯಾವುದೇ ವ್ಯವಹಾರ ಹೊಂದಿಲ್ಲ, ಜನರಿಗೆ ವಂಚನೆ ಮಾಡುತ್ತಾರೆ ಅಂತ ಗೊತ್ತಿರಲಿಲ್ಲ ಎಂದು ಸಚಿವ ಜಮೀರ್ ಅಹ್ಮದ್ಖಾನ್ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
ನಾನು ಈ ವರೆಗೆ ನಾಲ್ಕು-ಐದು ಬಾರಿ ಮನ್ಸೂರ್ ಖಾನ್ ಅವರನ್ನು ಭೇಟಿ ಮಾಡಿರಬಹುದು ಅಷ್ಟೆ, ಕಳೆದ ಕೆಲವು ದಿನಗಳ ಹಿಂದೆ ಇಫ್ತಾರ್ ಕೂಟದಲ್ಲಿ ಭೇಟಿ ಮಾಡಿದ್ದೆ ಹಾಗೂ ರಂಜಾನ್ ದಿನದಂದು ಅವರ ಮಳಿಗೆಗೆ ಆಹ್ವಾನದ ಮೇರೆಗೆ ಹೋಗಿದ್ದೆ ಬಿಟ್ಟರೆ ನನಗೂ ಅವರಿಗೂ ಯಾವುದೇ ವ್ಯಾವಹಾರಿಕ ಸಂಬಂಧ ಇಲ್ಲ ಎಂದು ಜಮೀರ್ ಅಹ್ಮದ್ ಹೇಳಿದರು.
ಮೀರ್ ಅಹ್ಮದ್ ಅವರು ಐಎಂಎ ಜ್ಯುವೆಲರ್ಸ್ ಮಾಲೀಕ ಮನ್ಸೂರ್ ಖಾನ್ ಅವರಿಂದ ಐದು ಕೋಟಿ ಸಾಲ ಪಡೆದಿದ್ದಾರೆ ಎಂದು ಸುದ್ದಿ ಹರಿಡಿದ್ದ ಕಾರಣ ಅವರು ಮೇಲ್ಕಂಡೆ ಸ್ಪಷ್ಟನೆಯನ್ನು ಸುದ್ದಿಗೋಷ್ಠಿಯಲ್ಲಿ ಇಂದು ನೀಡಿದರು. ಚಾರಿತ್ರ್ಯ ಹರಣ, ರಾಜಕೀಯ ಕುತಂತ್ರಕ್ಕೆ ಬಲಿಪಶುವಾಗಲಾರೆ: ಬೇಗ್ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿರುವುದು ಸ್ವಾಗತಾರ್ಹ, ಪ್ರಕರಣವನ್ನು ಸಿಬಿಐಗೆ ವಹಿಸಿದರೂ ಅಭ್ಯಂತರವಿಲ್ಲ ಎಂದು ಅವರು ಹೇಳಿದರು.
Comments are closed.