ಬೆಂಗಳೂರು: ಸುಮಲತಾ ಪರವಾಗಿ ಪ್ರಚಾರ ಮಾಡ್ತಾರೆ ಅವರ ವಿರುದ್ಧ ಕ್ರಮ ಇಲ್ಲ, ನನ್ನ ಮೇಲೆ ಯಾಕೆ ಈ ನಿರ್ಧಾರ ಎಂದು ಮಾಜಿ ಸಚಿವ ರೋಷನ್ ಬೇಗ್ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಲತಾ ಪರವಾಗಿ ಪ್ರಚಾರ ಮಾಡ್ತಾರೆ ಅವರ ವಿರುದ್ಧ ಕ್ರಮ ಇಲ್ಲ, ರಮೇಶ್ ಜಾರಕಿಹೊಳಿ ಸೇರಿದಂತೆ ಅನೇಕ ಜನರು ಪಕ್ಷದ ವಿರುದ್ಧ ಮಾತನಾಡಿದ್ದಾರೆ. ಅವರ ವಿರುದ್ಧ ಯಾಕೆ ಕ್ರಮ ಇಲ್ಲ ಎಂದು ಪ್ರಶ್ನೆ ಮಾಡಿದರು.
ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿದ್ದೇನೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್‌ನಲ್ಲಿ ಇಲ್ಲ. ಸತ್ಯ ಹೇಳಿದ ಕಾರಣಕ್ಕೆ ನನ್ನ ವಿರುದ್ಧ ಕ್ರಮ ಕೈಗೊಂಡಿದ್ದಾರೆ ತುಮಕೂರು, ಕೋಲಾರ, ಮಂಡ್ಯ ಭಾಗದ ನಾಯಕರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ?’ ಎಂದು ರೋಷನ್ ಬೇಗ್ ಹೇಳಿದರು.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸತ್ಯ ಹೇಳುವುದೆ ಅಪರಾಧವೇ?. ಲೋಕಸಭಾ ಚುನಾವಣೆ ಫಲಿತಾಂಶ ನೋಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಲು ಮುಂದಾಗಿಲ್ಲವೇ?, ರಾಜ್ಯದಲ್ಲಿ ಕೇವಲ ಒಂದು ಸೀಟು ಬಂತಲ್ಲ ಈ ಬಗ್ಗೆ ನೀವು ಏನು ಹೇಳುವಿರಿ?’ ಎಂದು ರೋಷನ್ ಬೇಗ್ ರಾಜ್ಯ ನಾಯಕರನ್ನು ಪ್ರಶ್ನೆ ಮಾಡಿದರು.
ನಿನ್ನೆ ರಾತ್ರಿ ನಂಗೆ ಪಕ್ಷದಿಂದ ಅಮಾನತು ಸುದ್ದಿ ಬಂತು, ನಾನು ರಾಹುಲ್ ಗಾಂಧಿ ವಿರುದ್ಧ ಟೀಕೆ ಮಾಡಿಲ್ಲ, ಈಗಿನವರೆಗೂ ನಾನೊಬ್ಬ ಪಕ್ಷದ ಕಾರ್ಯಕರ್ತ, ನಾನು ನಿಜ ಹೇಳಿದರೆ ಈ ರೀತಿ ಕ್ರಮ ತೆಗೆದ್ಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಒಂದೇ ಒಂದು ಸೀಟ್ ಬಂತು, ಯಾವ್ ಗತಿಯಲ್ಲಿ ಇದೆ ನೋಡಿ ಪಕ್ಷ , ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಮತ ಬಂದಿದೆ. ಪ್ರಜಾಪ್ರಭುತ್ವದಲ್ಲಿ ಒಪನ್ ಡಿಸ್ಕಷನ್ ಆದ್ರೆನೇ ಪಾರ್ಟಿಗೆ ಶಕ್ತಿ ಬರೋದು. ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ನಾನ್ ಹೇಳಿದ್ದೀನಿ, ಕ್ಯಾಂಪೇನ್ ಮಾಡುವಾಗ ನಮ್ಮನ್ಯಾರೂ ಇನ್ವೈಟ್ ಮಾಡ್ಲಿಲ್ಲ, ತುಮಕೂರಿನಲ್ಲಿ ಪಾಪ ಮುದ್ದ ಹನುಮೇಗೌಡ ಅವ್ರಿಗೆ ಮೋಸ ಆಯ್ತು, ಸತ್ಯ ಹೇಳಿದ್ರೆ ಅಪರಾಧನ ಎಂದು ಸಿದ್ದರಾಮಯ್ಯ ವಿರುದ್ಧ ರೋಷನ್ ಬೇಗ್ ವಾಗ್ದಾಳಿ ನಡೆಸಿದರು.
Comments are closed.