ಕೋಲಾರ: 9 ದಿನ ಸಂಸಾರ ಮಾಡಿದ ಗಂಡ ಕಾಣೆಯಾಗಿದ್ದು ಈಗ ಪತ್ನಿ ಪತಿಯ ಮನೆ ಮುಂದೆ ಧರಣಿ ಕುಳಿತಿರುವ ಘಟನೆ ಕೋಲಾರ ತಾಲೂಕಿನ ಸೀತಿ ಹೊಸೂರು ಗ್ರಾಮದಲ್ಲಿ ನಡೆದಿದೆ.
ಕೋಲಾರ ತಾಲೂಕಿನ ವೇಮಗಲ್ ಮೂಲದ 24 ವರ್ಷದ ನಾಗವೇಣಿ ಎಂಬವರನ್ನ ಅದೇ ತಾಲೂಕಿನ ಸೀತಿ ಹೊಸೂರು ಗ್ರಾಮದ ಪವನ್(25) ಎಂಬ ಯುವಕ ಪ್ರೀತಿಸಿ ಮದುವೆಯಾಗಿ ನಂತರ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ.
ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದ ನಾಗವೇಣಿ ಮತ್ತು ಪವನ್ ಇದೇ ತಿಂಗಳ ಜೂನ್ 5 ರಂದು ಕೋಲಾರದ ನಲಗಂಗಮ್ಮ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ನಂತರ ಇಲ್ಲಿಂದ ಹೋಗಿ ತಿರುಪತಿಯಲ್ಲಿ ಕೆಲ ದಿನಗಳ ಕಾಲ ಸಂಸಾರ ಮಾಡುತ್ತಿದ್ದ ಪವನ್ ಜೂನ್ 14ರಂದು ಪತ್ನಿಯನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಗಂಡ ಕಾಣೆಯಾಗಿದ್ದರಿಂದ ಗಾಬರಿಗೊಂಡ ಪತ್ನಿ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಬೇಸತ್ತ ನಾಗವೇಣಿ ಪತಿಯ ಮನೆ ಮುಂದೆ ಕುಳಿತು ಧರಣಿ ಮಾಡ್ತಿದ್ದಾರೆ.
Comments are closed.