ಕರ್ನಾಟಕ

ತುಮಕೂರಿನಲ್ಲಿ ಕಾರು ಅಪಘಾತ; ಒಂದೇ ಮನೆಯ 6 ಜನ ಸಾವು

Pinterest LinkedIn Tumblr


ತುಮಕೂರು (ಜೂನ್.28); ಕಾರು ಚಾಲಕನ ಎಡವಟ್ಟಿಗೆ ಒಂದೇ ಕುಟುಂಬದ 6 ಜನ ಸಾವನ್ನಪ್ಪಿರುವ ಧಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ

ತುಮಕೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಯಡಿಯೂರಿನಿಂದ ಬೆಂಗಳೂರಿನ ಕಡೆಗೆ ಸಂಚರಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಹೆದ್ದಾರಿಯ ಡಿವೈಡರ್ ದಾಟಿ ಇನೋವಾ ಕಾರು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ 8 ಜನರ ಪೈಕಿ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

13 ವರ್ಷದ ಮಗು ಹಾಗೂ ಮಹಿಳೆ ಮಾತ್ರ ಉಳಿದುಕೊಂಡಿದ್ದು, ತೀವ್ರ ಗಾಯಕ್ಕೆ ಒಳಗಾಗಿರುವ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಅಪಘಾತ ಪರಿಣಾಮ ಸ್ಥಳದಲ್ಲಿ ಎರಡು ಕಿ.ಮೀ ಉದ್ದಕ್ಕೆ ಟ್ರಾಫಿಕ್ ಜಾಮ್ ಉಂಟಾಗಿದೆ.

Comments are closed.