ಕರ್ನಾಟಕ

ಮದುವೆಯ ನೆನಪು ಹಂಚಿಕೊಂಡ ಸಚಿವರ ಹೆಂಡತಿ!

Pinterest LinkedIn Tumblr


ಸಾಮಾನ್ಯವಾಗಿ ಮದುವೆ ಎಂಬುವುದು ಅದ್ದೂರಿ, ವಿಜೃಂಭಣೆ, ವೈಭವದಿಂದ ಕೂಡಿರುತ್ತದೆ. ಹಾಗೂ ಎಲ್ಲರೂ ತಮ್ಮ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಳ್ಳಬೇಕು ಎಂಬ ಆಸೆ ಹೊಂದಿರುತ್ತಾರೆ. ಆದರೆ ಪ್ರಸ್ತುತ ಕೃಷಿ ಸಚಿವ ಕೃಷ್ಣ ಭೈರೇಗೌಡರವರು ಮೀನಾ ಅವರನ್ನು 17 ವರ್ಷಗಳ ಹಿಂದೆ ಬಹಳ ಸರಳವಾಗಿ ವಿವಾಹವನ್ನು ಆಗಿದ್ದರು. ಸದ್ಯ ವಿಚಾರವಾಗಿ ದೊರೆತ ಕೆಲವು ಚಿತ್ರಗಳನ್ನು ಮೀನಾ ಶೇಷಾದ್ರಿಯವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಚ್ಚಿಕೊಂಡಿದ್ದಾರೆ.

ಹೌದು ಯಾರಿಗೆ ಆದರೂ ತಮ್ಮ ಹಳೆಯ ಖುಷಿ ದಿನಗಳ ನೆನಪು ಬಂದಾಗ ಬಹಳ ಖುಷಿ ಪಡುವುದು ಸಹಜ. ಇದೀಗ ಮೀನಾರವರಿಗೆ ತಮ್ಮ ವಿವಾಹದ ಕೆಲವು ಚಿತ್ರಣಗಳು ಸಿಕ್ಕಿದ್ದು, ತಮ್ಮ ಹಳೆಯ ನೆನಪುಗಳನ್ನು ಮೇಲುಕು ಹಾಕುತ್ತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

17 ವರ್ಷಗಳ ಹಿಂದೆ ಜನತಾದಳ ರಾಜ್ಯಾಧ್ಯಕ್ಷ ಮಾಜಿ ಸಚಿವ ಸಿ. ಭೈರೇಗಾಡರ ಹಿರಿಯ ಮಗ ಇಂದಿನ ಕಾಂಗ್ರೆಸ್ ಸಚಿವ ಕೃಷ್ಣ ಭೈರೇಗೌಡರವರು ಹಾಗೂ ಮೀನಾ ಅವರನ್ನು ಜೂನ್ ತಿಂಗಳಲ್ಲಿ ವಿವಾಹವಾಗಿದ್ದ, ಕೆಲವು ಚಿತ್ರಣಗಳು ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಸದ್ಯ ಮನೆಯನ್ನು ಕ್ಲೀನ್ ಮಾಡುವ ವೇಳೆ ಈ ಚಿತ್ರಣಗಳು ದೊರೆತಿದೆ. ಈ ಸರಳ ವಿವಾಹದಲ್ಲಿ ಆದ ಕೆಲವು ಖರ್ಚು ವೆಚ್ಚಗಳ ಲೆಕ್ಕದ ಕಾಗದವೊಂದು ದೊರೆತಿದ್ದು, ನನ್ನ ಅಪ್ಪ ಕೇವಲ 1,98,325 ರೂಗಳಲ್ಲಿ ಬಹಳ ಸರಳವಾಗಿ ಬೆಂಗಳೂರಿನಲ್ಲಿ ಮದುವೆ ಮಾಡಿದ್ದರು.

ಇನ್ನೂ ವಿವಾಹದ ಒಂದು ಫೋಟೊ , ಲೆಕ್ಕ ಪತ್ರ ಗಳನ್ನು, ಅಂದಿನ ಪತ್ರಿಕೆಯೊಂದು ಸಚಿವ ಕೃಷ್ಣ ಭೈರೇಗೌಡರವರು ಹಾಗೂ ಮೀನಾರವರ ವಿವಾಹದ ಸುದ್ದಿಯನ್ನು ಪ್ರಕಟಿಸಿದ್ದ ಒಂದು ಚಿತ್ರಣವನ್ನು ನೆನಪಿಸಿಕೊಳ್ಳುತ್ತಾ ಸಂತಸದಿಂದ ಮೆಲುಕು ಹಾಕಿಕೊಂಡಿದ್ದಾರೆ.

Comments are closed.