ಕರ್ನಾಟಕ

ಶಾಸಕರ ರಾಜೀನಾಮೆ ಹಿಂದೆ ಈ ಪವರ್​​​ಫುಲ್​​​ ಮ್ಯಾನ್​​​ ಕೈವಾಡ

Pinterest LinkedIn Tumblr

ಹುಬ್ಬಳ್ಳಿ: ಮೈತ್ರಿ ಸರ್ಕಾರದ ಅಸ್ಥಿರತೆಯ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರು ಹೇಳಿದರು.

 

ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯದಮ ಜೊತೆ ಮಾತನಾಡಿದ ಅವರು, ದೇವೇಗೌಡರ ಕುಟುಂಬ ಒಂದು ನಿಮಿಷನೂ ಅಧಿಕಾರದಲ್ಲಿರೋದು ಸಿದ್ದರಾಮಯ್ಯಗೆ ಇಷ್ಟವಿಲ್ಲ, ಶಾಸಕರ ರಾಜೀನಾಮೆ, ಅವರ ಹೇಳಿಕೆಗಳು ಈ ಎಲ್ಲದರ ಹಿಂದಿನ ಸೂತ್ರದಾರ ಅವರೇ ಆಗಿದ್ದಾರೆ. ಸಿದ್ದರಾಮಯ್ಯಗೆ ಮೈತ್ರಿ ಸರ್ಕಾರದಲ್ಲಿ ಜಿ. ಪರಮೇಶ್ವರಗೆ ನಾಯಕತ್ವ ಸಿಗುತ್ತಿದೆ ಆತಂಕವಿದೆ ಎಂದು ಜೋಶಿ ಅವರು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ.

 

ಇನ್ನು ಕೃಷಿ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಮಾತನಾಡಿದ ಪ್ರಹ್ಲಾದ್​ ಜೋಶಿ, ಬಜೆಟ್ ಪೂರ್ಣವಾಗಿ ಓದಿಲ್ಲ ಎಂದು ಭಾವಿಸಿದ್ದೇನೆ. ಉದ್ಯೋಗ ಖಾತ್ರಿ ಯೋಜನೆಗೆ 60 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ಆದರೆ, ಯುಪಿಎ ಸರ್ಕಾರ ಇದ್ದಾಗ 47 ಸಾವಿರ ಕೋಟಿ ನೀಡಿದ್ದರು. 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ಸೌಲಭ್ಯ ರೂಪಿಸಲಾಗಿದೆ. ದೇಶದ ರೈತರನ್ನು ಶೋಷಣೆ ಮಾಡಿದ್ದು ಕಾಂಗ್ರೆಸ್. ರೈತರ ಈಗಿನ ಸಂಕಷ್ಟಕ್ಕೆ ಕಾಂಗ್ರೆಸ್ ಕಾರಣ, ನಾವಲ್ಲ ಎಂದು ಅವರು ತಿಳಿಸಿದರು.

 

ಸದ್ಯ ಸಿದ್ದರಾಮಯ್ಯ ರೈತರನ್ನು ಪುರಸ್ಕಾರ ಮಾಡಿದಕ್ಕೆ 130 ಇದ್ದದ್ದು, 78ಕ್ಕೆ ಬಂದಿದ್ದಾರೆ. ನಾವು 280 ಇದ್ದವರು 304ಕ್ಕೆ ತಲುಪಿದ್ದೇವೆ. ಜನಪರ ಕಾಳಜಿ ನೋಡಿಯೇ ಚುನಾವಣೆಯಲ್ಲಿ ಜನ ತೀರ್ಪು ನೀಡಿದ್ದಾರೆ. ಮುಂದಿನ 10 ವರ್ಷ ದೇಶ ಯಾವ ದಿಕ್ಕಿನಲ್ಲಿ ನಡೆಯಬೇಕು ಎಂಬುದನ್ನು ಬಜೆಟ್ ಬಿಂಬಿಸುತ್ತಿದೆ. ಇದೊಂದು ದೂರದೃಷ್ಟಿಯುಳ್ಳ ಬಜೆಟ್. ಸಾಮಾನ್ಯ ಜನರನ್ನ ದೃಷ್ಟಿಯಲ್ಲಿಟ್ಟುಕೊಂಡ ಬಜೆಟ್ ರೂಪಿಸಲಾಗಿದೆ ಎಂದು ಹುಬ್ಬಳ್ಳಿಯಲ್ಲಿ ಅವರು ಹೇಳಿದರು.

 

Comments are closed.