ದಾವಣಗೆರೆ : ನಾನು ಯಾವುದೇ ಆಪರೇಷನ್ ಗೆ ಒಳಗಾಗಿಲ್ಲಾ ಆದರೆ ಮುಖ್ಯಮಂತ್ರಿಗಳು ಚೇಂಜ್ ಆದರೂ ಆಗಬಹುದು ಎಂದು ಹೇಳುವ ಮೂಲಕ ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಲ್ಲ
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಶಾಸಕರು, ಕಾಂಗ್ರೆಸ್ ಎಲ್ಲಿರುತ್ತೋ, ಅಲ್ಲಿ ನಾನಿರುತ್ತೇನೆ. ಹಾಗಾಗಿ ಯಾರು ರಾಜೀನಾಮೆ ಕೊಟ್ಟರೂ ನಾನು ತಲೆ ಕೆಡಿಸಿಕೊಳ್ಳಲ್ಲ. ಒಂದು ವೇಳೆ ಮುಖ್ಯಮಂತ್ರಿಗಳು ಬದಲಾವಣೆ ಆದರೆ ಆಗಬಹುದು. ಮೈತ್ರಿ ಸರ್ಕಾರ ಮಾತ್ರ ಸುಭದ್ರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿ ಬಂದಿದ್ದೇನೆ. ಇಂದು ಬೆಳಗ್ಗೆ ಬಿಜೆಪಿಯವರು ಪೋನ್ ಮಾಡಿ ರಾಜೀನಾಮೆ ನೀಡಲು ಹೇಳಿದ್ದರು.ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಲ್ಲ, ಸರ್ಕಾರ ಏನೂ ಆಗಲ್ಲಾ, ಸರ್ಕಾರ ಸೇಫ್ ಆಗುತ್ತೇ, ಆದರೆ ಮುಖ್ಯಮಂತ್ರಿ ಬದಲಾಗಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನೂ ನಾನು ಯಾವುದೇ ಹಣ ಆಮೀಷಕ್ಕೆ ಒಳಗಾಗುವುದಿಲ್ಲಾ, ಬೆಂಗಳೂರಿಗೆ ಹೋಗುತ್ತಿದ್ದೇನೆ. ಅಲ್ಲಿನ ಬೆಳವಣಿಗೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲಾ ಎಂದು ತಿಳಿಸಿದರು.
ಚುನವಾಣೆ ವೇಳೆ ನಾನು ಜನರಿಗೆ ನೀಡಿದ್ದ ಮಾತಿನಂತೆ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ ಮಾತಿನಂತೆ ನಡೆದುಕೊಳ್ಳುತ್ತೇನೆ. ಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ವಿಸರ್ಜನೆ ಆಗಲ್ಲ. ಮಧ್ಯಂತರ ಚುನಾವಣೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ನ ಯಾವ ಶಾಸಕರು ಒಪ್ಪಿಕೊಳ್ಳಲ್ಲ. ಸಿಎಂ ಬದಲಾಗಬಹುದು ಅಷ್ಟೇ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ನ 13 ಶಾಸಕರು ಶನಿವಾರ ಸಂಜೇ ಸಾಮೂಹಿಕ ರಾಜೀನಾಮೆ ನೀಡಿದ್ದರು. ಇದು ಸಾಲದು ಎಂಬಂತೆ ಇನ್ನೂ 10 ಶಾಸಕರು ರಾಜೀನಾಮೆ ನೀಡಲಿದ್ಧಾರೆ ಎಂದು ಬಿ.ಸಿ. ಪಾಟೀಲ್ ಬಾಂಬ್ ಸಿಡಿಸಿದ್ದರು. ಇದೀಗ ಹರಿಹರ ಕಾಂಗ್ರೇಸ್ ಶಾಸಕ ಎಸ್.ರಾಮಪ್ಪ ನಾನು ಬಿಜೆಪಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Comments are closed.