ದೇವನಹಳ್ಳಿ: ಮೈತ್ರಿ ಸರ್ಕಾರದಲ್ಲಿ ನಡೆಯುತ್ತಿರುವ ಅತೃಪ್ತರ ರಾಜೀನಾಮೆ ಪರ್ವದ ಬಗ್ಗೆ ದೇವನಹಳ್ಳಿಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಬೆಂಕಿ ಹತ್ತಿದ್ದೇ ಬೆಳಗಾವಿಯಿಂದ ಎಂದು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರಕ್ಕೆ ಅತೃಪ್ತತೆಯ ಬೆಂಕಿ ಹತ್ತಿದ್ದೇ ಬೆಳಗಾವಿಯಿಂದ. ಬೆಂಕಿ ಆರಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಾನು ಎಂದೂ ರೆಸಾರ್ಟ್‌ಗೆ ಹೋದವನಲ್ಲ ಹಾಗಾಗಿ ರೆಸಾರ್ಟ್‌ಗೆ ಹೋಗಲ್ಲ. ನಾನು ನನ್ನ ಊರು ಬೆಳಗಾವಿಗೆ ತೆರಳುತ್ತಿದ್ದೇನೆ ಎಂದರು.
ಅತೃಪ್ತ ಶಾಸಕರು ಯಾರೂ ಬಿಜೆಪಿಯವರಲ್ಲ. ಕಾಂಗ್ರೆಸ್-ಜೆಡಿಎಸ್‌ನ ನಮ್ಮ ಅರ್ಧಕ್ಕೂ ಹೆಚ್ಚು ಶಾಸಕರು ವಾಪಾಸ್ ಬರ್ತಾರೆ . ಸಿಎಂ ಸಹ ಸಚಿವ ಸಂಪುಟ ಸಭೆಯಲ್ಲಿ ಅಭಯ ನೀಡಿದ್ದಾರೆ. ನೀವ್ಯಾರು ಹೆದರಬೇಡಿ ಅಂತ ಸಿಎಂ ಕುಮಾರಸ್ವಾಮಿ ಆಭಯ ನೀಡಿದ್ದಾರೆಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
Comments are closed.