ಶತಾಯಗತಾಯ ಸರ್ಕಾರ ಉಳಿಸಿಕೊಳ್ಳಲು ಸಿಎಂ ರೆಡಿಯಾಗಿದ್ದು, ಬಿಜೆಪಿ ಶಾಕ್ ನೀಡಲು ಸಿಎಂ ಡಿಕೆಶಿ ಜೊತೆ ರಿವರ್ಸ್ ಆಪರೇಶನ್ ಪ್ಲ್ಯಾನ್ ಆರಂಭಿಸಿದ್ದಾರೆ.
ಅಧಿವೇಶನದಲ್ಲಿ ವಿಶ್ವಾಸಮತಯಾಚನೆಗೆ ಕಾಲಾವಕಾಶ ಕೋರಿದ ಬೆನ್ನಲ್ಲೇ, ವಿಧಾನಸೌಧದಲ್ಲಿ ಡಿಕೆಶಿ ಜೊತೆ ಸಿಎಂ ಕುಮಾರಸ್ವಾಮಿ ರಹಸ್ಯ ಸಭೆ ನಡೆಸಿದ್ದು, ಸರ್ಕಾರ ಉಳಿಸಿಕೊಳ್ಳಲು ಬಿಜೆಪಿಯ ಯಾವ ಯಾವ ಶಾಸಕರಿಗೆ ಗಾಳ ಹಾಕಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇನ್ನು ಈಗಾಗಲೇ 7 ಕ್ಕೂ ಹೆಚ್ಚು ಬಿಜೆಪಿ ಶಾಸಕರು ಡಿಕೆಶಿಯವರ ಸಂಪರ್ಕದಲ್ಲಿದ್ದು, ಅದರಲ್ಲಿ ನಾಲ್ವರಿಗೆ ಮಂತ್ರಿಗಿರಿ ನೀಡಲು ಒಪ್ಪಿಸಿ ಕಾಂಗ್ರೆಸ್ ಡಿಕೆಶಿ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ 5 ಶಾಸಕರು ಒಪ್ಪಿಕೊಂಡಿದ್ದು, ಸರ್ಕಾರ ಸೇಫ್ ಆಗೋದಿಕ್ಕೆ ಅಗತ್ಯ ಸಿದ್ಧತೆಯನ್ನು ಡಿಕೆಶಿ ಮಾಡಿಕೊಂಡಿದ್ದಾರೆ.
ಹೀಗಾಗಿ ಇವತ್ತು ಗೌಪ್ಯವಾಗಿ ಡಿಕೆಶಿ ಮತ್ತು ಎಚ್ಡಿಕೆ ಸಭೆ ನಡೆಸಿದ್ದು, ಬಿಜೆಪಿ ಪ್ಲ್ಯಾನ್ಗೆ ಪ್ರತಿತಂತ್ರ ರೂಪಿಸಿದ್ದಾರೆ. ಇದೇ ವಿಶ್ವಾಸದಲ್ಲೇ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೂ ಸಿದ್ಧವಾಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಜೆಪಿಗೆ ಗೂಗ್ಲಿ ನೀಡಲು ಮೈತ್ರಿ ನಾಯಕರು ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ.
Comments are closed.