ಕರ್ನಾಟಕ

ರೆಸಾರ್ಟ್​ ಅಂಗಳದಲ್ಲಿ ಮೂರು ಪಕ್ಷಗಳ ರಾಜಕಾರಣ!!

Pinterest LinkedIn Tumblr


ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕಾರಣದ ಪರ್ವ ಆರಂಭವಾಗುವ ಸಾಧ್ಯತೆ ಇದೆ. ಸಿಎಂ ಕುಮಾರಸ್ವಾಮಿ ಸದನದಲ್ಲಿ ಅಗತ್ಯಬಿದ್ದರೇ ಮತ್ತೊಮ್ಮೆ ವಿಶ್ವಾಸಮತ ಯಾಚನೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ರೆಸಾರ್ಟ್ ರಾಜಕಾರಣದ ಪರ್ವ ಆರಂಭವಾಗುವ ಮುನ್ಸೂಚನೆ ದೊರೆತಿದೆ. ಮೂರು ಪಕ್ಷಗಳು ಶಾಸಕರನ್ನು ಕಾಯ್ದುಕೊಳ್ಳಲು ರೆಸಾರ್ಟ್​ ನತ್ತ ಮುಖ ಮಾಡಲು ನಿರ್ಧರಿಸಿದ್ದಾರೆ.

ಜೆಡಿಎಸ್​ ಕೆಲ ಅತೃಪ್ತ ಶಾಸಕರು ಈಗಾಗಲೇ ರಾಜೀನಾಮೆ ಮುಂಬೈ ಸೇರಿದ್ದರೇ, ಇತ್ತ ಕಾಂಗ್ರೆಸ್​ನ ಕೆಲ ಶಾಸಕರು ಇದೇ ಹಾದಿ ಹಿಡಿದಿದ್ದಾರೆ. ಇನ್ನುಳಿದ ಜೆಡಿಎಸ್ ಶಾಸಕರನ್ನು ಈಗಾಗಲೇ ಎಚ್​ಡಿಕೆ ಮುಂಜಾಗ್ರತಾ ಕ್ರಮವಾಗಿ ಕಳೆದ 5 ದಿನಗಳಿಂದ ದೇವನಹಳ್ಳಿ ರೆಸಾರ್ಟ್​ನಲ್ಲಿ ಕಾದಿಟ್ಟುಕೊಂಡಿದ್ದಾರೆ.

ಇದೀಗ ಇದೇ ಪ್ಲ್ಯಾನ್​ಗೆ ಕಾಂಗ್ರೆಸ್​ ನಾಯಕರು ಸಹ ಮುಂಧಾಗಿದ್ದು, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಎಲ್ಲ ಕಾಂಗ್ರೆಸ್ ಶಾಸಕರು ವಿಮಾನ ನಿಲ್ದಾಣದ ಬಳಿ ಇರುವ Clarks Exotica Convention Resort ಗೆ ತೆರಳಲಿದ್ದಾರೆ. ಈಗಾಗಲೇ ಹಲವು ಶಾಸಕರು ರಾಜೀನಾಮೆ ನೀಡಿರೋದರಿಂದ ಉಳಿದ ಶಾಸಕರು ಅತೃಪ್ತಿಯ ಹಾಡು ಹೇಳೋದನ್ನು ತಪ್ಪಿಸಲು ಡಿಕೆಶಿ ಈ ಪ್ಲ್ಯಾನ್ ಮಾಡಿದ್ದಾರೆ.

ಇನ್ನು ವಿಶ್ವಾಸಮತ ಮಂಡಿಸಲು ಮುಂದಾಗಿರುವ ಸಿಎಂ ಕುಮಾರಸ್ವಾಮಿಯವರಿಂದಾಗಿ ರಿವರ್ಸ್ ಆಫರೇಶನ್ ಭೀತಿಯಲ್ಲಿರುವ ಬಿಜೆಪಿ ಕೂಡ ರೆಸಾರ್ಟ್​ನತ್ತ ಮುಖಮಾಡಲು ನಿರ್ಧರಿಸಿದೆ. ಬಿಜೆಪಿಯ 105 ಶಾಸಕರು ರಾಯಲ್ ಆರ್ಕೇಡ್ ರೆಸಾರ್ಟ್​ಗೆ ತೆರಳಲಿದ್ದು, ಸೋಮವಾರ ಅಲ್ಲಿಂದ ನೇರವಾಗಿ ಸದನಕ್ಕೆ ಆಗಮಿಸಲಿದ್ದಾರೆ.

Comments are closed.