ರೆಬೆಲ್ ಆದ ಮುಖಂಡರ ಲಿಸ್ಟ್ ನಲ್ಲಿ ಗುರುತಿಸಿಕೊಂಡ ಕೈ ಶಾಸಕರೋರ್ವರು ಇದೀಗ ಟೈಂ ಫಿಕ್ಸ್ ಮಾಡಿದ್ದಾರೆ. ಅಲ್ಲದೇ ಯೂ ಟರ್ನ್ ಹೊಡೆಯುವ ಸಾಧ್ಯತೆ ಬಗ್ಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು [ಜು. 13] : ರಾಜ್ಯ ರಾಜಕಾರಣದಲ್ಲಿ ಅತೃಪ್ತರ ಆಟ ಮುಂದುವರಿದಿದೆ. ರಾಜೀನಾಮೆ ನೀಡಿದ ಮುಖಂಡರು ಮುಂಬೈನಲ್ಲಿಯೇ ಕುಳಿತಿದ್ದಾರೆ. ಇತ್ತ ಕೈ ಅತೃಪ್ತ ಮುಖಂಡ ಯೂ ಟರ್ನ್ ಹೊಡೆದಿದ್ದಾರೆ.
ನಮ್ಮ ಮುಖಂಡರು ನಮ್ಮ ಬಗ್ಗೆ ಮಾತನಾಡಿದ್ದಾರೆ. ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಎಂಟಿಬಿ ಹೇಳಿದ್ದಾರೆ.
ಕೈ ನಾಯಕರು ನಾಗರಾಜ್ ಅವರೊಂದಿಗೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿ ವಿವಿಧ ನಾಯಕರು ಚರ್ಚೆ ನಡೆಸಿದ್ದು, ಇದೀಗ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ರಾಜೀನಾಮೆ ವಾಪಸ್ ಪಡೆಯಲು ಸ್ವಲ್ಪ ಟೈಂ ಕೇಳಿದ್ದೇನೆ. ಶಾಸಕ ಸುಧಾಕರ್ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Comments are closed.