ಬೆಂಗಳೂರು: ತಾಜ್ ವೀವಂತ್ ಹೊಟೇಲ್‌ನಲ್ಲಿ ಕಾಂಗ್ರೆಸ್ ಶಾಸಕರ ವಾಸ್ತವ್ಯ ಹೂಡಿದ್ದು, ಓರ್ವ ಶಾಸಕರ ಮೂರು ದಿನ ಖರ್ಚು ಕೇಳಿದ್ರೆ ಜನಸಾಮಾನ್ಯ ಶಾಕ್ ಆಗೋದು ಗ್ಯಾರಂಟಿ. ಯಾಕಂದ್ರೆ ಜನಸಾಮಾನ್ಯರು ಒಂದು ತಿಂಗಳ ಖರ್ಚು, ಓರ್ವ ಶಾಸಕನ ಮೂರು ದಿನಗಳ ಖರ್ಚಿಗೆ ಸಮವಾಗಿದೆ.
ಬರೀ ಮೂರು ದಿನದ ವಾಸ್ತವ್ಯಕ್ಕೆ ಕಾಂಗ್ರೆಸ್ ಶಾಸಕರಿಗಾಗಿ ಲಕ್ಷ ಲಕ್ಷ ಖರ್ಚು ಮಾಡಲಾಗಿದೆ. ತಾಜ್ ವೀವಂತನಲ್ಲಿ ಒಂದು ದಿನಕ್ಕೆ ಒಬ್ಬರಿಗೆ 7,500 ರೂ.+ಟ್ಯಾಕ್ಸ್ 2,100 ರೂ.=9,600 ರೂ. ಖರ್ಚು ಭರಿಸಲಾಗುತ್ತಿದೆ. ಮಾರ್ನಿಂಗ್ ಕಾಫಿ ಬೆಲೆ 160 ರೂ. ಆದ್ರೆ, ಬೆಳಗ್ಗೆ ಟಿಫಿನ್ ಬೆಲೆ 450 ರೂ. ಆಗಿದೆ. ಅಲ್ಲಿಗೆ ಒಬ್ಬ ಶಾಸಕನ ಬೆಳಗ್ಗಿನ ಒಟ್ಟು ಉಪಹಾರದ ಮೊತ್ತ 610ರೂ.
ಇನ್ನು ಮಧ್ಯಾಹ್ನ ಊಟ ಮತ್ತು ಡಿನ್ನರ್ ಬೆಲೆ- 1,350 ರೂ. ರೂಂ ಬಾಡಿಗೆ 4-6ಸಾವಿರವಿದ್ದು, ಟ್ಯಾಕ್ಸ್ ಎಲ್ಲ ಸೇರಿಸಿ ಒರ್ವ ಶಾಸಕನ ಒಂದು ದಿನದ ಖರ್ಚು 9-10 ಸಾವಿರ ಆಗಿದೆ. ಹೀಗೆ ಎಲ್ಲ ಶಾಸಕರ ಖರ್ಚು ವೆಚ್ಚ ಸೇರಿಸಿ, ಮೂರು ದಿನಕ್ಕೆ 8 ಲಕ್ಷ 64 ಸಾವಿರ ಆಗಿದೆ.
ಮೂರು ದಿನಕ್ಕೆ ಒಬ್ಬರ ಕಾಫಿ- ತಿಂಡಿ, ಊಟದ ಖರ್ಚು 11,700 ರೂ. ಆಗಿದ್ದು, ಎಲ್ಲ ಶಾಸಕರ ಮೂರು ದಿನ ಊಟ- ತಿಂಡಿ ಖರ್ಚು 3 ಲಕ್ಷದ 51 ಸಾವಿರ ರೂಪಾಯಿ ಆಗಿದೆ.
ಇನ್ನು ರಮಡ ಮತ್ತು ಸಾಯಿ ಲೀಲಾ ಹೊಟೇಲ್‌ನಲ್ಲಿ ಬಿಜೆಪಿ ಶಾಸಕರು ತಂಗಿದ್ದು, ಈ ಹೊಟೇಲ್‌ಗಳ ಖರ್ಚಿನ ಬಗ್ಗೆ ಎರಡೂ ರೆಸಾರ್ಟ್‌ಗಳ ಸಿಇಓ ಮಹೇಶ್ ಸ್ಪಷ್ಟನೆ ನೀಡಿದ್ದಾರೆ. ರೆಸಾರ್ಟ್ ರೂಂಗಳ ಬಗ್ಗೆ ಮಾಧ್ಯಮಗಳಲ್ಲಿ ಗೊಂದಲಕಾರಿ ಮಾಹಿತಿ ಬರ್ತಿದೆ. ರಮಡದಲ್ಲಿ ಪ್ರತೀ ರೂ ಬಾಡಿಗೆ 4 ರಿಂದ 6 ಸಾವಿರ ರೂ. ಚಾರ್ಜ್ ಇದೆ. ಸಾಯಿ ಲೀಲಾದಲ್ಲಿ 3.5 ಸಾವಿರ ರೂ. ಇದೆ. 30 ಸಾವಿರ ಎಲ್ಲ ಬಾಡಿಗೆ ಚಾರ್ಜ್ ಮಾಡ್ತಿಲ್ಲ ನಾವು. ಇನ್ನು ಈ ರೆಸಾರ್ಟ್‌ಗಳು ಸಂಪೂರ್ಣ ಖಾಸಗಿಗೆ ಸೇರಿದವು. ಯಾವ ಶಾಸಕರೂ ಇದರ ಪಾಲುದಾರತ್ವ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Comments are closed.