ಕರ್ನಾಟಕ

ಪಕ್ಷದ ಶಾಸಕರನ್ನ ಕಳ್ಳರಿಗೆ ಹೋಲಿಸಿದ ಸಚಿವ!

Pinterest LinkedIn Tumblr


ಬಳ್ಳಾರಿ: ರಾಜೀನಾಮೆ ನೀಡಿ, ಅಂಗೀಕಾರಕ್ಕಾಗಿ ಕಾಯುತ್ತಿರುವ ಸ್ವಪಕ್ಷೀಯ ಶಾಸಕರನ್ನ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್, ಕಳ್ಳರಿಗೆ ಹೋಲಿಸಿದ್ದಾರೆ.

ಈ ಬಗ್ಗೆ ಬಳ್ಳಾರಿಯಲ್ಲಿ ಮಾತನಾಡಿದ ಪರಮೇಶ್ವರ್ ನಾಯಕ್, ಶಾಸಕರಾದವರು ಜನರಿಗೋಸ್ಕರ ಶಾಸನ ಮಾಡಬೇಕು. ಕ್ಷೇತ್ರದ ಅಭಿವೃದ್ದಿ ಮಾಡಿ, ಜನರಿಗೆ ಮೂಲಭೂತ ಸೌಕರ್ಯ ಕೊಡಬೇಕು. ಆದ್ರೆ ಅಧಿಕಾರದ ದಾಹಕ್ಕೆ ಕಳ್ಳರ ರೀತಿ ಓಡುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮೊನ್ನೆ ಟಿವಿಯಲ್ಲಿ ನೋಡಿದಿರಲ್ಲ ಎಲ್ಲರೂ ಕಳ್ಳರ ರೀತಿ ಓಡೋಡಿ ಬಂದ್ರು ಎಂದು ಮೊನ್ನೆ ಸ್ಪೀಕರ್ ಕಚೇರಿಗೆ ಸಂಜೆ ಆರು ಗಂಟೆ ಒಳಗೆ ಹಾಜರಾಗಬೇಕಿದ್ದ ಹಿನ್ನಲೆ, ಮುಂಬೈನಿಂದ ಬಂದ ಶಾಸಕರು ಸಮಯದ ಅಭಾವದಿಂದ ಓಡೋಡಿ ಬಂದು ಸ್ಪೀಕರ್ ಕಚೇರಿ ತಲುಪಿದ್ದರು. ಆ ಸನ್ನಿವೇಶವನ್ನ ಪರಮೇಶ್ವರ್ ಕಳ್ಳರ ರೀತಿ ಓಡಿ ಬಂದಿದ್ದಾರೆ ಅಂತಾ ವ್ಯಂಗ್ಯವಾಡಿದ್ದಾರೆ.

ನಾಚಿಕೆ ಆಗಬೇಕು ಇವರೆಲ್ಲರಿಗೂ. ಇದಕ್ಕೆಲ್ಲ ಕಾರಣ ಬಿಜೆಪಿಯ ಅಧಿಕಾರ ದಾಹ. ಬಿಜೆಪಿ ಅಧಿಕಾರದ ದಾಹದಿಂದ ಏನು ಬೇಕಾದರು ಮಾಡಲು ಸಿದ್ದರಿದ್ದಾರೆ. ಅನಾಚಾರವಾಗಲಿ, ಭ್ರಷ್ಟಾಚಾರವಾಗಲಿ ಮಾಡಿ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Comments are closed.