ಕರ್ನಾಟಕ

ಸೋಮವಾರ ಸದನಕ್ಕೆ ಬರುತ್ತೇನೆ! ಅತೃಪ್ತ ರಾಮಲಿಂಗಾ ರೆಡ್ಡಿ

Pinterest LinkedIn Tumblr


ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ತಮ್ಮ ರಾಜೀನಾಮೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಲಾರಂಭಿಸಿದ್ದಾರೆ. ಇದುವರೆಗೂ ಡಿಸಿಎಂ, ಸಿಎಂ ಸ್ಥಾನ ಕೊಟ್ರು ರಾಜೀನಾಮೆ ವಾಪಸ್ಸು ಪಡೆಯಲ್ಲ ಎಂದಿದ್ದ ರಾಮಲಿಂಗಾ ರೆಡ್ಡಿ ಇದೀಗ ಜುಲೈ 15 ರವರೆಗೆ ರಾಜಕೀಯ ಮಾತನಾಡಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರಿನ ಲಕ್ಕಸಂದ್ರ ನಿವಾಸದ ಬಳಿ ಮಾತನಾಡಿದ ರಾಮಲಿಂಗಾ ರೆಡ್ಡಿ, ನಾನು ಜುಲೈ 15 ರವರೆಗೆ ಯಾವುದೇ ರಾಜಕೀಯದ ವಿಚಾರವನ್ನು ಮಾತನಾಡಲು ಬಯಸುವುದಿಲ್ಲ. ಸೋಮವಾರ ಸದನಕ್ಕೆ ಹಾಜರಾಗಿ ಸ್ಪೀಕರ್ ಭೇಟಿ ಮಾಡುತ್ತೇನೆ ಎಂದರು.

ನನ್ನ ಮನೆಗೆ ಬಿಜೆಪಿ,ಕಾಂಗ್ರೆಸ್​,ಜೆಡಿಎಸ್​​ ಎಲ್ಲ ಪಕ್ಷದವರು ಬರುತ್ತಾರೆ. ಅದಕ್ಕೆಲ್ಲ ವಿಶೇಷ ಅರ್ಥ ಕಲ್ಪಿಸೋದಿಕ್ಕೆ ಆಗುತ್ತಾ ಎಂದರು. ಆದರೇ ರಾಜೀನಾಮೆ ವಿಚಾರದಲ್ಲಿ ರಾಮಲಿಂಗಾ ರೆಡ್ಡಿ ರಾಜಿಯಾಗುತ್ತಾರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಲು ನಿರಾಕರಿಸಿದ್ದು, ಎಂಟಿಬಿಯಂತೆ ರಾಮಲಿಂಗಾ ರೆಡ್ಡಿಯವರು ಯೂ ಟರ್ನ್ ಹೊಡೆಯುತ್ತಾರಾ ಎಂಬ ಅನುಮಾನ ಸೃಷ್ಟಿಯಾಗಿದೆ.

Comments are closed.