ಕರ್ನಾಟಕ

ನಾಳೆ ಸದನಕ್ಕೆ ಹಾಜರಾಗಲಿದ್ದು, ಯಾವ ನಿಲುವು ತಾಳುತ್ತೇನೆ ಎಂಬುದನ್ನು ಕಾದು ನೋಡಿ ಎಂದ ರಾಮಲಿಂಗಾರೆಡ್ಡಿ !

Pinterest LinkedIn Tumblr

ಬೆಂಗಳೂರು: ನಾಳೆ ಸದನಕ್ಕೆ ಹಾಜರಾಗಲಿದ್ದು, ಯಾವ ನಿಲುವು ತಾಳುತ್ತೇನೆ ಎಂಬ ಬಗ್ಗೆ ಏನನ್ನು ಹೇಳಲಾರೆ. ಕಾದು ನೋಡಿ ಎಂದು ಕಾಂಗ್ರೆಸ್​ ನಾಯಕರ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತರ ರಾಜೀನಾಮೆ ಅಂಗೀಕಾರದ ಕುರಿತು ಸುಪ್ರೀಂ ಕೋರ್ಟ್​ ತೀರ್ಪು ನೀಡಿದೆ. ರಾಜೀನಾಮೆ ಅಂಗೀಕಾರದ ಕುರಿತು ಸ್ಪೀಕರ್​ ಹಾಗೂ ಕಾನೂನು ತಜ್ಞರು ಕ್ರಮ ಕೈಗೊಳ್ಳುತ್ತಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷಕ್ಕೆ ಅಲ್ಲ. ನನ್ನ ರಾಜೀನಾಮೆ ಇನ್ನು ಅಂಗೀಕಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ನಾಳಿನ ಕಲಾಪದಲ್ಲಿ ಭಾಗಿಯಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇನ್ನು ವಿಶ್ವಾಸ ಮತ ವೇಳೆ ಯಾವ ನಡೆ ಕೈ ಗೊಳ್ಳುತ್ತೇನೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ, ಕಾದು ನೋಡಿ. ರಾಜೀನಾಮೆ ಹಿಂಪಡೆಯುವ ಕುರಿತು ನಾನೇನು ಮಾತನಾಡುವುದಿಲ್ಲ. ಅದೇ ರೀತಿ ಮೈತ್ರಿ ಸರ್ಕಾರದ ಅಳಿವು- ಉಳಿವು ಬಗ್ಗೆ ಏನು ಹೇಳಲಾರೆ ಎಂದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದ ತಮ್ಮ ನಡೆ ಬಗ್ಗೆ ಕುತೂಹಲ ಕಾಯ್ದುಕೊಂಡಿರುವ ರಾಮಲಿಂಗಾ ರೆಡ್ಡಿ ಮನವೊಲಿಕೆಗೆ ಕಾಂಗ್ರೆಸ್​ ನಾಯಕರು ಹರಸಾಹಸ ನಡೆಸಿದ್ದಾರೆ. ಆದರೆ, ರಾಮಲಿಂಗಾ ರೆಡ್ಡಿ ಮಾತ್ರ ರಾಜೀನಾಮೆ ಹಿಂಪಡೆಯುವ ಬಗ್ಗೆ ಮಾತ್ರ ಸ್ಪಷ್ಟ ನಿರ್ಧಾರ ತಿಳಿಸಿಲ್ಲ. ಬದಲಾಗಿ ಪಕ್ಷವನ್ನು ಬಿಡುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್​ ನಲ್ಲಿಯೇ ಉಳಿಯಲಿದ್ದೇನೆ ಎಂದು ತಿಳಿಸಿದ್ದಾರೆ.

Comments are closed.