ಒಂದೆಡೆ ಸರ್ಕಾರ ಕೊನೆಕ್ಷಣಗಳನ್ನು ಎಣಿಸುತ್ತಿದ್ದರೇ, ಇತ್ತ ರ ಮನವೊಲಿಕೆಗೂ ಬಗ್ಗದೇ ಮುಂಬೈ ಸೇರಿದ್ದಾರೆ. ಆದರೆ ಈ ರಾಜಕೀಯ ಬೃಹನ್ನಾಟಕವನ್ನು ನೋಡಿ ಬೇಸತ್ತಿರುವ ಜನರು ತಮ್ಮ ತಮ್ಮ ಶಾಸಕರನ್ನು ಹುಡುಕಿಕೊಡುವಂತೆ ಆಗ್ರಹಿಸಿ ಸ್ಪೀಕರ್ ಹಾಗೂ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ.
ಹೌದು ಬೆಂಗಳೂರು ಶಾಸಕರುಗಳಾದ ಎಸ್.ಟಿ.ಸೋಮಶೇಖರ್, ಮುನಿರತ್ನ ಹಾಗೂ ಭೈರತಿ ಬಸವರಾಜು ಅತೃಪ್ತಿಯ ಹಾಡಿನೊಂದಿಗೆ ರಾಜೀನಾಮೆ ಸಲ್ಲಿಸಿ ಮುಂಬೈ ಸೇರಿದ್ದಾರೆ. ಕಳೆದ ಒಂದು ವಾರದಿಂದ ಮುಂಬೈನಲ್ಲೇ ವಾಸ್ತವ್ಯ ಹೂಡಿರುವ ಶಾಸಕರು ಕ್ಷೇತ್ರದತ್ತ ಮುಖಮಾಡುವ ಮನಸ್ಸೇ ಮಾಡುತ್ತಿಲ್ಲ.
ಆದರೆ ಈ ಕ್ಷೇತ್ರಗಳಲ್ಲಿ ಮಳೆಯಾಗದೇ ಇರೋದರಿಂದ ಕುಡಿಯುವ ನೀರು ಸೇರಿದಂತೆ ಜನರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಈ ಮೂರು ಕ್ಷೇತ್ರಗಳ ಜನರು ನಮ್ಮ ಶಾಸಕರು ಕಾಣೆಯಾಗಿದ್ದು ಅವರನ್ನು ಹುಡುಕಿಕೊಡಿ ಎಂದು ಸ್ಪೀಕರ್ ಕಚೇರಿಗೆ ದೂರು ನೀಡಿದ್ದಾರೆ.
ಇನ್ನು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ಜಿಲ್ಲೆಗಳಲ್ಲೂ ಇದೇ ಸಮಸ್ಯೆ ಇದ್ದು, ಕ್ಷೇತ್ರದ ಸಮಸ್ಯೆಗೆ ಸ್ಪಂದಿಸದೇ ಕಾಣೆಯಾಗಿರುವ ಶಾಸಕರುಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಅಥಣಿ ಶಾಸಕ ಮಹೇಶ್ ಕುಮಟಳ್ಳಿ ನಾಪತ್ತೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಕ್ಷೇತ್ರದ ಜನರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಶಾಸಕರ ರಾಜೀನಾಮೆ ಪ್ರಹಸನ ಹಾಗೂ ರಾಜಕೀಯ ಮೇಲಾಟಗಳಿಂದ ಕ್ಷೇತ್ರದ ಜನರು ಸಮಸ್ಯೆಗೀಡಾಗುತ್ತಿದ್ದು ಪರಿಹಾರ ಕಾಣದೇ ಶಾಸಕರ ಹುಡುಕಾಟಕ್ಕೆ ಮುಂಧಾಗಿದ್ದಾರೆ. ಆದರೆ ಎಮ್ಎಲ್ಎಗಳು ಮಾತ್ರ ಜನರ ಸಮಸ್ಯೆಗಳಿಗೇ ಕ್ಯಾರೇ ಎನ್ನುತ್ತಿಲ್ಲ.
Comments are closed.