ಕರ್ನಾಟಕ

ಯಡಿಯೂರಪ್ಪ ಮುಖ್ಯಮಂತ್ರಿ ಆಗೋದನ್ನು ತಡೆಯಲು ದೋಸ್ತಿ ಪ್ಲ್ಯಾನ್​!!

Pinterest LinkedIn Tumblr

ಇಂದು ಮಧ್ಯಾಹ್ನ 1.30 ರೊಳಗೆ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯಪಾಲರು ಸಿಎಂಗೆ ಸೂಚನೆ ನೀಡಿದ ಬೆನ್ನಲ್ಲೇ, ದೋಸ್ತಿ ನಾಯಕರು ರಾಜ್ಯಪಾಲರ ಸೂಚನೆಯಿಂದ ಸೇಫಾಗಿ ಪಾರಾಗಲು ರಣತಂತ್ರ ರೂಪಿಸುವುದರಲ್ಲಿ ನಿರತರಾಗಿದ್ದಾರೆ.

ಹೌದು ರಾಜ್ಯಪಾಲರ ನಿರ್ದೇಶನ ಬರುತ್ತಿದ್ದಂತೆ ಸಿಎಂ ಎಚ್ಡಿಕೆ, ಸಚಿವ ಡಿಕೆಶಿವಕುಮಾರ್ ಹಾಗೂ ಸಿದ್ಧರಾಮಯ್ಯ ರಹಸ್ಯವಾಗಿ ಚರ್ಚೆ ನಡೆಸಿದ್ದು, ರಾಜ್ಯಪಾಲರ ಸೂಚನೆಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೇ ರಾತ್ರಿಯೇ ರಾಜ್ಯಪಾಲರಿಗೆ ಸಿಎಂ ಪತ್ರ ಬರೆದಿದ್ದು, ಈಗಾಗಲೇ ವಿಶ್ವಾಸಮತವನ್ನು ಸದನದಲ್ಲಿ ಪ್ರಸ್ತಾಪ ಮಾಡಲಾಗಿದೆ. ವಿಶ್ವಾಸಮತ ಪ್ರಸ್ತಾಪ ಈಗ ಸದನದ ಸ್ವತ್ತು. ಸದನ ಹೇಳಿದಂತೆ ಮಾಡುತ್ತೇವೆ ಎಂದಿದ್ದಾರೆ.

ಅಲ್ಲದೇ ರಾಜ್ಯಪಾಲರ ಸೂಚನೆ ವಿರುದ್ಧ ಸುಪ್ರೀಂ ಕೋರ್ಟ್​ ಮೆಟ್ಟಲೇರಲು ನಿರ್ಧರಿಸಿರುವ ದೋಸ್ತಿ ನಾಯಕರು, ಇಂದಿನ ಸದನದಲ್ಲೂ ಗದ್ದಲ ಎಬ್ಬಿಸಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಲಿದ್ದಾರೆ. ಇದರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗೋವಂತಹ ಸ್ಥಿತಿಯನ್ನು ಸೃಷ್ಟಿಸುವುದು ಹಾಗೂ ಆ ಮೂಲಕ ಬಿಎಸ್​ವೈ ಸಿಎಂ ಆಗೋದನ್ನು ತಡೆಯಲು ತಂತ್ರಗಾರಿಕೆ ರೂಪಿಸಲಾಗಿದೆ.

ಇದ್ದರೇ, ಮೈತ್ರಿ ಸರ್ಕಾರ ಇರಲಿ, ಹೋದ್ರೆ ರಾಷ್ಟ್ರಪತಿ ಆಳ್ವಿಕೆ ಬರಲಿ ಅನ್ನೋ ಆಂಗ್ಯಲ್​ನಲ್ಲಿ ದೋಸ್ತಿ ನಾಯಕರು ಪ್ಲ್ಯಾನ್ ರೂಪಿಸಿದ್ದು, ಇವರು ಅಂದುಕೊಂಡಂತೆ ನಡೆದರೇ ಇನ್ನೊಂದು ವಾರಗಳ ಕಾಲ ವಿಶ್ವಾಸಮತಯಾಚನೆ ಪ್ರಕ್ರಿಯೆಯನ್ನೇ ಮುಂದುವರೆಸಿಕೊಂಡು ಹೋಗಲು ಸಮ್ಮಿಶ್ರ ಸರ್ಕಾರ ಪ್ಲ್ಯಾನ್ ರೂಪಿಸಿದೆ.

Comments are closed.