ಕರ್ನಾಟಕ

ಕುಮಾರಸ್ವಾಮಿಯವರೇ ದಮ್ಮ್​ ಇದ್ದರೇ ಚರ್ಚೆಗೆ ಬನ್ನಿ: ರೇಣುಕಾಚಾರ್ಯ

Pinterest LinkedIn Tumblr


ಬೆಂಗಳೂರು: ವಿಧಾನಸೌಧದಲ್ಲಿ ನಿನ್ನೆ ನಡೆದ ಸದನದ ವೇಳೆ ನನ್ನ ಮೌನಕ್ಕೆ ಅರ್ಥ ಇದೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಹೇಳಿದರು.

ಯಲಹಂಕದ ರಮಡ ರೆಸಾರ್ಟ್ ಬಳಿ ಮಾಧ್ಯದಮದ ಜೊತೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ನನ್ನ ಹೆಸರಿನಲ್ಲಿ ಭಜನೆ ಮಾಡಿದ್ದರು ನಿಮ್ಮ ಮಾತು ನಿಜವಾದರೆ ತಾವು ನಂಬಿದ ಶೃಂಗೇರಿ ಶಾರದಾಂಭೆ ಮತ್ತು ಮಂಜುನಾಥನ ಸನ್ನಿಧಿಗೆ ಬನ್ನಿ ಪ್ರಮಾಣ ಮಾಡಿ ಎಂದು ಅವರು ನುಡಿದರು.

ಇನ್ನು ನೀವು ಹೇಳಿರೋದೆಲ್ಲಾ ಸಾಬೀತಾದರೆ ಬಹಿರಂಗವಾಗಿ ಹ್ಯಾಂಗ್​ ಮಾಡಿಕೊಳ್ಳುತ್ತೇನೆ. ಬಹಿರಂಗವಾಗಿ ಪ್ರಮಾಣ ಮಾಡಿ, ಧರ್ಮಸ್ಥಳದ ಮಂಜುನಾಥ, ನೀವು ನಂಬಿರೋ ಶೃಂಗೇರಿ ಶಾರದಾಂಭೆ ಸನ್ನಿಧಾನಕದಕ್ಕೆ ಬನ್ನಿ ಪ್ರಮಾಣ ಮಾಡೋಣ. ಬನ್ನಿ ಚರ್ಚೆಗೆ ಇಲ್ಲ, ಬಹಿರಂಗವಾಗಿ ಕ್ಷಮೆ ಕೇಳಿ ಎಂದು ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ರೇಣುಕಾಚಾರ್ಯ ಅವರು ಬಹಿರಂಗವಾಗಿ ಸವಾಲ್​ ಹಾಕಿದರು.

ನಮ್ಮನ್ನು ಉದ್ವೇಗಗೊಳಿಸುವ ಉದ್ದೇಶದಿಂದಲೇ ಸಿಎಂ ಕುಮಾರಸ್ವಾಮಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಕುಮಾರಣ್ಣ ನಾನು ನಿಮ್ಮ ಸಹಾಯದಿಂದ ಸಚಿವನಾಗಿಲ್ಲ, ನಾನು ಯಡಿಯೂರಪ್ಪನರವರ ನೆರವಿನಿಂದ ಮಂತ್ರಿಯಾಗಿದ್ದು, ನಿಮಗೆ ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದರು.

ಅಲ್ಲದೇ ದೇವೇಗೌಡರ ಕುಟುಂಬ ಸುಳ್ಳು ಹೇಳೋದ್ರಲ್ಲಿ ನಂಬರ್ ಒನ್, ಅವರ ಕುಟುಂಬಕ್ಕೆ ಡಾಕ್ಟರೇಟ್ ಕೊಡಬೇಕು. ಸಿಎಂ ಕುಮಾರಸ್ವಾಮಿ ಮೊದಲು ರಾಜೀನಾಮೆ ನೀಡಬೇಕು. ನಿನ್ನ ಮಧ್ಯಸ್ಥಿಕೆಗೆ ನಾನು ಬಂದು ಕೇಳಿರಲಿಲ್ಲ, ನಾಡಿನ ಮುಖ್ಯಮಂತ್ರಿಯಾಗಿ ಇಂತಹ ಹೇಳಿಕೆ ನೀಡೋಕೆ ನಾಚಿಕೆಯಾಗಲ್ವಾ(?) ಮುಂದಿನ ಅಧಿವೇಶನದಲ್ಲಿ ನಿಮ್ಮ ಎಲ್ಲಾ ಆರೋಪಗಳಿಗೆ ತಕ್ಕ ಉತ್ತರ ನೀಡ್ತೇನೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಮಾತನಾಡಿದ್ದಾರೆ.

Comments are closed.