ಕರ್ನಾಟಕ

ಸಿದ್ದುಗೆ ಮುಖ್ಯಮಂತ್ರಿ ಪಟ್ಟ? ಮಾಜಿ ಸಿಎಂ ಭೇಟಿ ಮಾಡಿದ ಜೆಡಿಎಸ್ ನಿಯೋಗ

Pinterest LinkedIn Tumblr


ಬೆಂಗಳೂರು(ಜುಲೈ.21): ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. ಬೆಂಗಳೂರಿನಿಂದ ಮುಂಬೈಗೆ ಶಿಫ್ಟ್ ಆಗಿದ್ದ ಅತೃಪ್ತರು ನ್ಯಾಯಕ್ಕಾಗಿ ಸುಪ್ರೀಂಕೋರ್ಟ್​ ಬಾಗಿಲು ತಟ್ಟಿಯಾಗಿದೆ. ಇಷ್ಟಾದರೂ ಅತೃಪ್ತರ ಮನವೊಲಿಸುವ ದೋಸ್ತಿ ನಾಯಕರ ಯತ್ನ ವಿಫಲಗೊಂಡಿದೆ. ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸ ಮಂಡನೆ ದಾಳ ಎಸೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಇದರಿಂದ ಬೇಸತ್ತ ಜೆಡಿಎಸ್ ನಾಯಕರು, ಮತ್ತೆ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಲು ನಿರ್ಧರಿಸಿದ್ಧಾರೆ. ಎಲ್ಲಾ ಪ್ರಯತ್ನವನ್ನು ಮಾಡಿ ಸೋತ ಮೇಲೆ ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವುದೊಂದೇ ದಾರಿ ಎಂದು ಭಾವಿಸಿದಂತಿದೆ.

ನಿನ್ನೆಯಷ್ಟೇ ಸಿದ್ದರಾಮಯ್ಯನವರು ಜೆಡಿಎಸ್​​ ಶಾಸಕ ಶಿವಲಿಂಗೇಗೌಡ ಬಳಿ ಸಿಎಂ ಹುದ್ದೆ ನಿರಾಕರಿಸಿದ್ದರು. ಸದ್ಯ ಮತ್ತೊಂದು ಜೆಡಿಎಸ್​​​ ನಾಯಕರ ದಂಡು ಮಾಜಿ ಸಿಎಂ ನಿವಾಸಕ್ಕೆ ತೆರಳಿದೆ. ಅಲ್ಲದೇ ಸರ್ಕಾರ ಉಳಿಸಲು ನಿಮ್ಮಿಂದಲೇ ಸಾಧ್ಯ. ಹಾಗಾಗಿ ಮುಖ್ಯಮಂತ್ರಿ ಆಗಬೇಕೆಂದು ಸಚಿವ ಸಿ.ಎಸ್​​ ಪುಟ್ಟರಾಜು, ಶಿವಲಿಂಗೇಗೌಡ, ಭೋಜೇಗೌಡ ಒತ್ತಡ ಹಾಕಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗಿನ ಮಾತುಕತೆ ಜೆಡಿಎಸ್​ ನಿಯೋಗ, ಸಿಎಂ ಕುಮಾರಸ್ವಾಮಿ ನಿವಾಸಕ್ಕೆ ತೆರಳಿದೆ ಎಂದು ತಿಳಿದು ಬಂದಿದೆ.

ಈ ಹಿಂದೆಯೇ ಸಿದ್ದರಾಮಯ್ಯನವರ ಆಪ್ತ ಶಾಸಕರ ನಡವಳಿಕೆ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇವರ ರಾಜೀನಾಮೆ ಹಿಂದೆ ಸಿದ್ದರಾಮಯ್ಯ ಕೈವಾಡ ಇರಬಹುದು ಎಂದು ಶಂಕಿಸಿದ್ದರು.

ಇನ್ನು ನಾಲ್ಕಾರು ಶಾಸಕರು ಹೇಳಿದಾಕ್ಷಣ ಮುಖ್ಯಮಂತ್ರಿ ಮಾಡಲು ಆಗುವುದಿಲ್ಲ. ಆರಂಭದಿಂದಲೂ ಸರ್ಕಾರಕ್ಕೆ ತೊಂದರೆ ಕೊಡುತ್ತಿರುವವರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ ಎಂಬ ದೇವೇಗೌಡರ ಹೇಳಿಕೆ ಸಿದ್ದರಾಮಯ್ಯನವರ ವಿರುದ್ಧದ ಅಸಮಾಧಾನ ಎತ್ತಿ ತೋರುತ್ತಿತ್ತು.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವುದಾದಲ್ಲಿ ಕಾಂಗ್ರೆಸ್‌ಗೆ ನೀಡಿದ ಬೆಂಬಲ ವಾಪಾಸ್ ಪಡೆಯಲಾಗುತ್ತದೆ. ಒಪ್ಪಂದದ ಪ್ರಕಾರ ಐದು ವರ್ಷ ಜೆಡಿಎಸ್‍ಗೆ ಮುಖ್ಯಮಂತ್ರಿ ಹುದ್ದೆ ಅಧಿಕಾರ ಕೊಟ್ಟರೆ ಮಾತ್ರ ಬೆಂಬಲ ನಿಡುತ್ತೇವೆ ಎಂದು ಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಎಚ್ಚರಿಕೆ ನೀಡಿದ್ದರು

ಕೆಲವು ಅತೃಪ್ತ ಶಾಸಕರು ಸಿದ್ದರಾಮಯ್ಯ ಪುನಃ ಮುಖ್ಯಮಂತ್ರಿ ಆಗಲಿ ಎನ್ನುತ್ತಿದ್ದಾರೆ. ಅವರ ಬೆಂಬಲಿಗರೇ ರಾಜೀನಾಮೆ ನೀಡಿದ್ಧಾರೆ. ಈ ಮೂಲಕ ಸಿದ್ದರಾಮಯ್ಯನವರೇ ತಮ್ಮ ಸಿಎಂ ಬೇಡಿಕೆ ಇಡುತ್ತಿದಾರೆ. ಆದರೆ, ಇದಕ್ಕೆ ನಮ್ಮ ಪಕ್ಷ ಒಪ್ಪೋಲ್ಲ ಎಂದಿದ್ದರು.

Comments are closed.