ಕರ್ನಾಟಕ

ಹತ್ತಿರ ಮಾರ್ಗವಾಗಿರುವುದರಿಂದ ಈ ಮಾರ್ಗದಲ್ಲಿ ಹೋಗೋಣ ರೀ ಎಂದು ಯಡಿಯೂರಪ್ಪ ಗದರಿದ್ದು ಯಾಕೆ..?

Pinterest LinkedIn Tumblr


ಮಂಡ್ಯ: ಹುಟ್ಟೂರು ಬೂಕನಕೆರೆಗೆ ಶಾರ್ಟ್‍ಕಟ್‍ಲ್ಲಿ ಹೋಗೋಣ ರೀ ಎಂದು ಎಸ್‍ಪಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಗದರಿದ ಘಟನೆ ಇಂದು ನಡೆದಿದೆ.

ಶಾರ್ಟ್‌ಕಟ್‌ನಲ್ಲಿ ಹೋಗೋಣ ರೀ

ಪೊಲೀಸರು ಬೆಂಗಳೂರು ಮೈಸೂರು ರಸ್ತೆ ಮೂಲಕ ಕೆ.ಆರ್.ಪೇಟೆ ರಸ್ತೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಪ್ರಯಾಣಕ್ಕೆ ಮಾರ್ಗವನ್ನು ನಿಗದಿ ಮಾಡಿದ್ದರು. ಆಗ ಯಡಿಯೂರಪ್ಪ ಅವರು, ಬೂಕನಕೆರೆಗೆ ಶಾರ್ಟ್‌ಕಟ್‌ನಲ್ಲಿ ಹೋಗೋಣ ರೀ, ಅದು ಹತ್ತಿರವಾದ ಮಾರ್ಗವಾಗಿರುವುದರಿಂದ ಈ ಮಾರ್ಗದಲ್ಲಿ ಹೋಗೋಣ ಎಂದು ಮಂಡ್ಯ ಎಸ್‍ಪಿ ಶಿವಪ್ರಕಾಶ್ ಅವರಿಗೆ ಗದರಿದ್ದಾರೆ.

ಹತ್ತಿರ ಮಾರ್ಗವಾಗಿರುವುದರಿಂದ ಈ ಮಾರ್ಗದಲ್ಲಿ ಹೋಗೋಣ

ನಂತರ ಯಡಿಯೂರಪ್ಪ ಅವರನ್ನು ಹೆಲಿಪ್ಯಾಡ್‍ನಿಂದ ಪಾಂಡವಪುರ ಮಾರ್ಗವಾಗಿ ಕೆ.ಆರ್ ಪೇಟೆ ರಸ್ತೆ ಮೂಲಕ ಬೂಕನಕೆರೆಗೆ ಕರೆದುಕೊಂಡು ಹೋಗಿದ್ದಾರೆ. ಇದು ಹತ್ತಿರ ಮಾರ್ಗವಾಗಿರುವುದರಿಂದ ಈ ಮಾರ್ಗದಲ್ಲಿ ಹೋಗೋಣ ಎಂದು ಸಿಎಂ ಬಿಎಸ್‍ವೈ ಹೋಗಿದ್ದಾರೆ.

ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರು, ತಮ್ಮ ಹುಟ್ಟೂರು ಕೆ.ಆರ್‌.ಪೇಟೆ ತಾಲೂಕಿನ ಬೂಕನಕೆರೆಗೆ ತೆರಳಿದ್ದು ಮನೆ ದೇವರಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ.

Comments are closed.