ಮುಂಬೈನಲ್ಲಿರೋ ಶಾಸಕರು ಅನರ್ಹತೆ ಭೀತಿಯಿಂದ ನನ್ನನ್ನು ಸಂಪರ್ಕಿಸಿದ್ದರು ಅನ್ನೋ ಮಾಜಿ ಸಿಎಂ ಸಿದ್ದು ಮಾತಿಗೆ ಮುಂಬೈನಿಂದಲೇ ಅತೃಪ್ತ ಶಾಸಕರು ತಿರುಗೇಟು ನೀಡಿದ್ದಾರೆ. ನಾವು ಸಿದ್ದರಾಮಯ್ಯಗೆ ಯಾವುದೇ ಕರೆ ಮಾಡಿಲ್ಲ. ಅಲ್ಲದೆ ನಮಗೆ ಅನರ್ಹತೆ ಆಗುವ ಯಾವುದೇ ಭೀತಿ ನಮಗಿಲ್ಲ ಇಲ್ಲ ಎಂದು ಸಿದ್ದು ಮಾತಿಗೆ ಅತೃಪ್ತ ಶಾಸಕರು ಟಾಂಗ್ ನೀಡಿದ್ದಾರೆ.
ಬಿಎಸ್ ಯಡಿಯೂರಪ್ಪನವರ ವಿಶ್ವಾಸಮತದ ಪರೀಕ್ಷೆ ನಂತರ ಮುಂಬೈನಲ್ಲಿರೋ ಅತೃಪ್ತ ಶಾಸಕರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಮಂಗಳವಾರದ ನಂತರ ಬೆಂಗಳೂರಿಗೆ ಬರಲು ಅತೃಪ್ತರು ನಿರ್ಧರಿಸಿದ್ದು. ಬೆಂಗಳೂರಿಗೆ ಬಂದ ನಂತ್ರ ಅತೃಪ್ತರು ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಪುಣೆ ಮತ್ತು ಮುಂಬೈನಲ್ಲಿ ಎರಡು ಪ್ರತ್ಯೇಕ ತಂಡಗಳಾಗಿ ನೆಲೆಸಿರುವ ಅತೃಪ್ತ ಶಾಸಕರನ್ನು ಮಾಜಿ ಡಿಸಿಎಂ ಆರ್.ಅಶೋಕ್,ಅಶ್ವತ್ಥನಾರಾಯಣ್ ಕಾಯುತ್ತಿದ್ದಾರೆ.
Comments are closed.