ಕರ್ನಾಟಕ

ಬಿಜೆಪಿಗೆ ಜೆಡಿಎಸ್​ ಬಾಹ್ಯ ಬೆಂಬಲ ಘೋಷಣೆ: ಕೆ.ಎನ್​ ರಾಜಣ್ಣ

Pinterest LinkedIn Tumblr


ತುಮಕೂರು: ಸರ್ಕಾರ ನಾವು ಬೀಳಿಸಿಲ್ಲ ಅದೇ ಬಿದ್ದು ಹೋಯ್ತು, ಪಾಪದ ಕೊಡ ತುಂಬಿ ಪತನವಾಗಿದೆ ಎಂದು ಮಧುಗಿರಿ ಕ್ಷೇತ್ರದ ಮಾಜಿ ಕಾಂಗ್ರಸ್​ ಶಾಸಕ ಕೆ.ಎನ್​ ರಾಜಣ್ಣ ಅವರು ಹೇಳಿದರು.

ತುಮಕೂರಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಮೈತ್ರಿ ಮುಂದುವರೇದರೇ ಕಾಂಗ್ರೆಸ್ ಸೊನ್ನೆಯಾಗಲಿದೆ, ಮೈತ್ರಿ ಮುಂದುವರೆಯಬಾರದು. ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಬಾಹ್ಯ ಬೆಂಬಲ ನೀಡ್ತಿವಿ ಅಂತ ಘೋಷಿಸುತ್ತಾರೆ ನೋಡ್ತಾ ಇರಿ, ಅವರೆಲ್ಲರು ವ್ಯಾಪಾರಸ್ಥರು, ವ್ಯವಹಾರ ನಡೆಯಲು ಏನ್ ಬೇಕಾದ್ರು ಮಾಡ್ತಾರೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ವಿಪಕ್ಷ ನಾಯಕ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಬೇಕು. ಅವರೇ ನಮ್ಮ ವಿಪಕ್ಷ ನಾಯಕ. ಪರಮೇಶ್ವರ್ ಹಿಂದೆ ಒಬ್ಬನು ಶಾಸಕರು ಇಲ್ಲ, ನಿಲ್ಲಲ್ಲ ಅವರು ಹೇಗೆ ವಿಪಕ್ಷ ನಾಯಕರಾಗ್ತಾರೆ(?) ಎಂದು ಅವರು ಹೇಳಿದ್ದಾರೆ.

ಸದ್ಯ ನಾನು ಬಿಜೆಪಿಗೆ ಹೋಗಲ್ಲ, ರಾಜಕೀಯಕ್ಕೆ ನಿಲ್ಲಲ್ಲ ಅಂತಾ ಹೇಳಿದಿನಿ. ಪರಮೇಶ್ವರ್​​ಗೆ ಡಿಸಿಎಂ ಸ್ಥಾನ ಹೋಗಿರುವುದರಿಂದ ತುಮಕೂರಿನಲ್ಲಿ ಟ್ರಾಫಿಕ್​​ ಸಮಸ್ಯೆ ತಪ್ಪಿದೆ. ಪದೇ ಪದೇ ಪರಮೇಶ್ವರ್ ಬರುತ್ತಿದರಿಂದ ಟ್ರಾಫಿಕ್ ಸಮಸ್ಯೆ ಇತ್ತು, ಸದ್ಯ ಅದು ಇಲ್ಲ ಎಂದು ಕೆ.ಎನ್​ ರಾಜಣ್ಣ ಅವರು ತುಮಕೂರಲ್ಲಿ ನುಡಿದರು.

Comments are closed.