ಬೆಂಗಳೂರು: ಅತೃಪ್ತ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಸಂಪರ್ಕ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ರೇಣಕಾಚಾರ್ಯ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಎಂಟಿಬಿ, ಬಿಸಿಪಾಟೀಲ್ ಮುಂಬೈ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಅವರ ಧೈರ್ಯ ಮೆಚ್ಚಬೇಕು ಎಂದು ಅವರು ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಎಷ್ಟೇ ಒತ್ತಡ, ಅಧಿಕಾರದ ಆಸೆ ತೋರಸಿದ್ರು ಅವರು ವಾಪಸ್ ಬರಲಿಲ್ಲ, ಸರ್ಕಾರ ಪತನ ಆಗಲಿ ಅಂತಾ ಪ್ರತಿಜ್ಞೆ ಮಾಡಿದರು. ಈಗ ಸರ್ಕಾರ ಪತನಗೊಂಡಿದೆ. ಅವರ ಅಪ್ಪನಾಣೆಗೂ ಮೋದಿ ಪ್ರಧಾನಿಯಾಗಲ್ಲ, ಕುಮಾರಸ್ವಾಮಿ ಸಿಎಂ ಆಗಲ್ಲ, ಯಡಿಯೂರಪ್ಪ ಕೂಡ ಸಿಎಂ ಆಗಲ್ಲ ಎಂದಿದರು ಆದರೆ ಯಡಿಯೂರಪ್ಪ ಇಂದು ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಅವರನ್ನು ನಾನು ಟೀಕೆ ಮಾಡಲ್ಲ ಎಂದು ಅವರು ತಿಳಿಸಿದ್ದಾರೆ.
ಜೆಡಿಎಸ್ ಶಾಸಕರ ಬಾಹ್ಯ ಬೆಂಬಲ ನೀಡುವ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂಗೆ ಈ ಮೈತ್ರಿ ಸಾಕಾಗಿದೆ. ಈ ಕಾಂಗ್ರೆಸ್ ಸಹವಾಸದಿಂದ ಹಾಳಾದ್ವಿ ಅಂತಾ ನಿನ್ನೆ ಸಭೆಯಲ್ಲಿ ಹಲವಾರು ಶಾಸಕರು ಹೇಳಿದ್ದಾರಂತೆ, ನಂಗೆ ಇವತ್ತು ಬೆಳಗ್ಗೆ ದೂರವಾಣಿ ಕರೆ ಮಾಡಿ ಹೇಳಿದರು. ನನ್ನ ಹತ್ರಾ ಸಾಕ್ಷಿ ಕೂಡ ಇದೆ. ಅವರೆಲ್ಲರೂ ನನ್ನ ಮಿತ್ರರು ಸಮಯ ಬಂದಾಗ ಹೆಸರು ಹೇಳುತ್ತೇನೆ ಎಂದು ಅವರು ನುಡಿದರು.
ಸದ್ಯ ವಿಶ್ವಾಸಮತ ಯಾಚನೆ ಸಂದರ್ಭ ಜೆಡಿಎಸ್ ಬಾಹ್ಯ ಬೆಂಬಲ ಹೇಳಿಕೆಯನ್ನು ನಾನು ಸ್ವಾಗತ ಮಾಡುತ್ತೇನೆ. ಚುನಾವಣೆಗೆ ಹೋಗೋಕೆ ಇಷ್ಟ ಇಲ್ಲ ಎಂದು ಕೂಡ ಜೆಡಿಎಸ್ ಶಾಸಕರು ಸ್ಪಷ್ಟವಾಗಿ ಮಾತಾನಾಡಿದ್ದಾರೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಹೇಳಿದ್ದಾರೆ.
Comments are closed.