ಕರ್ನಾಟಕ

ಕುಮಾರಸ್ವಾಮಿ ಕಾಲು ಗಂಟೆ ಕಣ್ಣೀರು ಹಾಕಿದ ಸ್ಥಳ ಗೊತ್ತಾ?

Pinterest LinkedIn Tumblr


ಬೆಂಗಳೂರು: ಬೆಂಗಳೂರು ಲೋಕಸಭಾ ಕ್ಷೇತ್ರದ ಸಭೆ ಕರೆದಿದ್ದೇವೆ ಕೆ. ಗೋಪಾಲಯ್ಯ ಅವರು ನಮ್ಮ ಮೇಲೆ ಅನೇಕ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಹೇಳಿದರು.

ನಗರದಲ್ಲಿಂದು ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿ ಬಾಂಬೆಗೆ ಹೋಗಿದ್ದಾರೆ. ಸ್ಪೀಕರ್ ಈ ವಾರದಲ್ಲಿ ತೀರ್ಮಾನ ಕೊಡುವುದಾಗಿ ತಿಳಿಸಿದ್ದಾರೆ ನಂತರ ಚುನಾವಣೆ ಇರುತ್ತೋ ಇಲ್ವೋ ಗೊತ್ತಿಲ್ಲ, ನಾನು ಸೋತ ದಿನದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಜುಲೈ ಕೊನೆ ಅಥವಾ ಆಗಸ್ಟ್ 2ನೇ ವಾರಕ್ಕೆ 2000 ಹೆಣ್ಣು ಮಕ್ಕಳ ಕಾನ್ಫರೆನ್ಸ್ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಅಷ್ಟೇ ಅಲ್ಲದೇ ಯಾರು ಏನೇ ಮಾಡಿದರು ಈ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ, ಸರ್ಕಾರ ಹೋದರು ನಮಗೆ ತೊಂದರೆ ಇದೆ. ಈ ಪಕ್ಷ ಉಳಿಸುವ ಕೆಲಸ ಮಾಡ್ತೀನಿ. ಕುಮಾರಸ್ವಾಮಿ ಸಿಎಂ ಆಗಿ ಎಷ್ಟು ನೋವು ತಿಂದಿದ್ದಾರೆ. ಜೆ.ಪಿ ಭವನದಲ್ಲಿ 15 ನಿಮಿಷ ಅತ್ತಿದ್ದಾರೆ. ಎಷ್ಟು ಕಷ್ಟಪಟ್ಟಿದ್ದಾರೆ ಎಲ್ಲಾ ಗೊತ್ತಿದೆ ಎಂದು ದೇವೇಗೌಡರು ಹೇಳಿದರು.

ಇನ್ನು ಸರ್ಕಾರ ಹೋದ್ರು ಚಿಂತೆಯಿಲ್ಲ, ಪಕ್ಷ ಸಂಘಟನೆ ಮಾಡ್ತೀನಿ, ಸರ್ಕಾರ ಹೋಯ್ತು ಏನ್ ಮಾಡೋಕೆ ಆಗೊಲ್ಲ. ನಾನು ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಯಾವುದೇ ದ್ವೇಷ ಇಲ್ಲದೆ ಕೆಲಸ ಮಾಡುತ್ತೇನೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯಕ್ಕೆ ಒಳ್ಳೆಯದು ಮಾಡಿದರೆ ನಮ್ಮ ಸಹಕಾರ ಇರುತ್ತೆ, ನಾವು ಪರಿಣಾಮಕಾರಿಗೆ ವಿರೋಧ ಪಕ್ಷ ಕೆಲಸ ಮಾಡಲು ನಾನು ಸೂಚನೆ ಎಂದು ಅವರು ತಿಳಿಸಿದರು.

Comments are closed.