ಕರ್ನಾಟಕ

ಸಿದ್ದರಾಮಯ್ಯ ವಿರುದ್ಧ ಎಂಟಿಬಿ ನಾಗರಾಜ್ ಕಿಡಿ

Pinterest LinkedIn Tumblr


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್​ನ ಹಿರಿಯ ಮುಖಂಡರಾದ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಾಧ್ಯಮದ ಮುಂದೆ ಸುಳ್ಳು ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ರೆಬೆಲ್ ಶಾಸಕ ಎಂಟಿಬಿ ನಾಗರಾಜ್ ಕಿಡಿ ಕಾರಿದ್ದಾರೆ.

ನ್ಯೂಸ್​ 18 ಕನ್ನಡದೊಂದಿಗೆ ಮುಂಬೈನಿಂದ ಮಾತನಾಡಿದ ಎಂಟಿಬಿ ನಾಗರಾಜ್, ನಾವು ಯಾವುದೇ ಕಾರಣಕ್ಕೂ ಭಯ ಬೀಳುವುದಿಲ್ಲ. ನಮ್ಮನ್ನು ಅನರ್ಹ ಮಾಡಲಿ, ಏನೇ ಮಾಡಲಿ. ನಾವು ಯಾವುದಕ್ಕೂ ಬೆದರುವುದಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಅವರು ಸುಳ್ಳು ಸುಳ್ಳು ಮಾಹಿತಿಯನ್ನು ಮಾಧ್ಯಮದ ಮುಂದೆ ನೀಡುತ್ತಿದ್ದಾರೆ. ಅವರೊಬ್ಬ ಕಾಂಗ್ರೆಸ್​ನ ಹಿರಿಯ ನಾಯಕರಾಗಿ ಹೀಗೆ ಹೇಳಿಕೆಗಳನ್ನು ನೀಡುವುದು ಅವರ ಘನತೆಗೆ ಸರಿಹೊಂದುವುದಿಲ್ಲ. ಅವರು ತಿಳಿದುಕೊಂಡಿರುತ್ತಾರೆ ಇದರಿಂದ ನನ್ನ ಘಟನೆ ಇನ್ನೂ ಹೆಚ್ಚಾಗುತ್ತದೆ ಎಂದು. ಆದರೆ, ಇದರಿಂದ ಅವರೇ ತಮ್ಮ ಘನತೆ ಕಳೆದುಕೊಳ್ಳುತ್ತಾರೆ. ನಾವು ರಾಜೀನಾಮೆ ನೀಡಿರುವ ಶಾಸಕರು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲೇ ಬೆಂಗಳೂರಿಗೆ ಬಂದು ಎಲ್ಲವನ್ನೂ ಸುದ್ದಿಗೋಷ್ಠಿಯಲ್ಲಿ ಬಹಿರಂಗ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಂಬೈನಲ್ಲಿರುವ ಅತೃಪ್ತ ಶಾಸಕರು ತಮ್ಮಗೆ ಕರೆ ಮೇಲೆ ಕರೆ ಮಾಡುತ್ತಿದ್ದಾರೆ. ಆದರೆ, ನಾನು ಯಾರ ಕರೆಯನ್ನು ಸ್ವೀಕರಿಸಿಲ್ಲ ಎಂದು ಹೇಳಿಕೆ ನೀಡಿದ್ದರು.

ರಾಜೀನಾಮೆ ನೀಡಿದವರಲ್ಲಿ ಮೂವರು ಶಾಸಕರನ್ನು ಸ್ಪೀಕರ್​ ಅನರ್ಹಗೊಳಿಸಿದ್ದಾರೆ. ಉಳಿದ ಶಾಸಕರ ರಾಜೀನಾಮೆಯ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರಿಗೆ ಭಯ ಶುರುವಾಗಿದ್ದು, ಅವರಲ್ಲಿ ಕೆಲವರು ಮತ್ತೆ ಕಾಂಗ್ರೆಸ್​ಗೆ ಬರಲು ಮನಸ್ಸು ಬದಲಾಯಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು.

Comments are closed.