ಕರ್ನಾಟಕ

‘ಅವರು ಕರೆದಲ್ಲಿಗೆ ಹೋಗುವುದಲ್ಲ ನಾವು ಕರೆದಲ್ಲಿಗೆ ಅವರು ಬರಬೇಕು’

Pinterest LinkedIn Tumblr

ವಿಜಯಪುರ: ಆಪರೇಷನ್ ಕಮಲದಲ್ಲಿ ಬಿಜೆಪಿ ಭಾಗಿಯಾಗಿದೆ ಎಂಬ ವಿಚಾರವನ್ನು ನಿನ್ನೆ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ಅವರು ಶುಕ್ರವಾರ ಹೇಳಿದರು.

ವಿಜಯಪುರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಇದು ಆಪರೇಷನ್ ಅಂತ 6 ಕೋಟಿ ಕನ್ನಡಿಗರಿಗೆ ಗೊತ್ತಿದೆ ಇವರು ರಾಜ್ಯದ ಜನತೆ ದಡ್ಡರು ಅಂತಾ ಅನ್ಕೊಂಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸ್ವತಃ ಆಪರೇಷನ್ ಕಮಲ ಒಪ್ಪಿಕೊಂಡಿದ್ದಾರೆ ಎಂದರು.

ಇನ್ನು ಸಚಿವ ಖಾತೆ ಹಂಚಿಕೆ ವಿಚಾರವಾಗಿ 16 ಜನರಿಗೆ ವಿಷ ಕೊಡಬೇಕಾ(?) ಎಂಬ ಮಾತನ್ನು ಸಿಎಂ ಬಿ.ಎಸ್​ ಯಡಿಯೂರಪ್ಪ ಅವರು ಹೇಳಿದ್ದರು.

ಅಷ್ಟೇ ಅಲ್ಲದೇ ಉಡುಪಿ ಮಠದ ಪೇಜಾವರ ಶ್ರೀಗಳ ವಿರುದ್ಧ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ವಾಗ್ದಾಳಿ ನಡೆಸಿದ್ದು, ಮೊದಲು ತಮ್ಮ ಮಠಗಳಲ್ಲಿರುವ ಹುಳುಕುಗಳನ್ನು ಸರಿ ಪಡಿಸಿಕೊಳ್ಳಲಿ. ಬೇರೆ ಧರ್ಮಗಳಲ್ಲಿ ಕಡ್ಡಿ ಆಡಿಸುವುದನ್ನು ನಿಲ್ಲಿಸಲಿ ಎಂದು ಅವರು ನುಡಿದರು.

ಸದ್ಯ ದಲಿತರೊಂದಿಗೆ ಭೋಜನ ಮಾಡಿ, ದಲಿತ ಮಠಾಧಿಪತಿಯನ್ನು ನಿಮ್ಮ ಮಠಗಳಿಗೆ ನೇಮಿಸಿ, ಲಿಂಗಾಯತರನ್ನಾದರೂ ನಿಮ್ಮ ಮಠಗಳ ಮಠಾಧೀಶರನ್ನಾಗಿ ಮಾಡಲಿ. ಪೇಜಾವರ ಶ್ರೀಗಳು ಕರೆದ ಕಡೆ ಹೋಗಲಿಕ್ಕೆ ಅವರೇನು ಪ್ರಧಾನಿಯಾ(?) ಇಲ್ಲ ಹೈಕಮಾಂಡಾ(?) ನಮಗೆ ಚರ್ಚೆಗೆ ಪಂಥಾಹ್ವಾನ ಕೊಡಲು ಇವರು ಯಾರು(?) ಎಂದು ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಮಾತನಾಡಿದ್ದಾರೆ.

Comments are closed.