ಕರ್ನಾಟಕ

ಅಮಿತ್ ಶಾ ಅಂಕಿತಕ್ಕೆ ಸಂಪುಟ ಪಟ್ಟಿ ಕೊಂಡೊಯ್ದ ಯಡಿಯೂರಪ್ಪ!

Pinterest LinkedIn Tumblr


ಬಿಎಸ್ವೈ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 12 ದಿನ ಕಳೆದಿದ್ದರೂ ಇನ್ನು ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಹೈಕಮಾಂಡ್​​ ಒಪ್ಪಿಗೆ ಕಾಯುತ್ತಿರುವ ಬಿಎಸ್​ವೈ ಇದೀಗ ಅಂತಿಮ ಪಟ್ಟಿಯೊಂದಿಗೆ ದೆಹಲಿ ತಲುಪಿದ್ದು, ಶಾ ಹಾಗೂ ಮೋದಿ ಅಂಕಿತದ ಬಳಿಕ ಬಿಎಸ್​ವೈ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ.

ಈಗಾಗಲೇ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿ ದೇಶದ ಗಮನ ಸೆಳೆದಿರುವ ಶಾ ಈಗ ಕರ್ನಾಟಕದತ್ತ ಚಿತ್ತ ಹರಿಸಲಿದ್ದು, ಶಾ ಒಪ್ಪಿಗೆಯ ಬಳಿಕವೇ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ. ಮೊದಲ ಕಂತಿನಲ್ಲಿ 13 ಶಾಸಕರು ಮಾತ್ರ ಸಚಿವ ಸ್ಥಾನ ಪಡೆದುಕೊಳ್ಳಲಿದ್ದು, ವರಮಹಾಲಕ್ಷ್ಮೀ ಹಬ್ಬದಂದು ಅಂದ್ರೆ ಅಗಸ್ಟ್ 9 ರಂದು ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಇನ್ನು ಬಿಎಸ್​ವೈ ಸಚಿವ ಸಂಪುಟ ಸೇರೋ ಸಂಭಾವ್ಯರು ಯಾರು ಅನ್ನೋದನ್ನು ನೋಡೋದಾದ್ರೇ, ಆರ್. ಅಶೋಕ್, ವಿ. ಸೋಮಣ್ಣ,ಮಾಧುಸ್ವಾಮಿ, ಕೆ.ಎಸ್.ಈಶ್ಚರಪ್ಪ,ಬಿ. ಶ್ರೀರಾಮುಲು, ಗೋವಿಂದ ಕಾರಜೋಳ,,ಡಾ.ಅಶ್ವತ್ಥ ನಾರಾಯಣ್​​​,ಶಶಿಕಲಾ ಜೊಲ್ಲೆ, ದತ್ತಾತ್ರೇಯ ಪಾಟೀಲ್ ರೇವೂರ್,ರಾಜೂಗೌಡ,ನಾಗೇಶ್ ,ಜಗದೀಶ್ ಶೆಟ್ಟರ್, ಶಂಕರ್ ಪಾಟೀಲ್ ಮುನೇನಕೊಪ್ಪ, ನೆಹರೂ ಒಲೇಕಾರ್ ಸಚಿವ ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ.

ಇನ್ನು ಹಲವು ಮಂತ್ರಿಸ್ಥಾನಗಳನ್ನು ಅತೃಪ್ತರಿಗಾಗಿ ಮೀಸಲಿರಿಸಲಾಗಿದ್ದು, ಅವರ ಅನರ್ಹತೆಯ ವಿಚಾರ ಸುಪ್ರೀಂ ಕೋರ್ಟ್​ನಲ್ಲಿ ತೀರ್ಮಾನವಾದ ಬಳಿಕ ಸ್ಥಾನ ಪಡೆದುಕೊಳ್ಳಲಿದ್ದಾರೆ.

Comments are closed.