ಕರ್ನಾಟಕ

ಕೆ.ಎಸ್.ಭಗವಾನ್ ಬಾಯಲ್ಲಿ ಮೋದಿ ಗುಣಗಾನ!

Pinterest LinkedIn Tumblr

ಸದಾಕಾಲ ದೇವರು, ಧರ್ಮ ,ರಾಮಾಯಣ,ಮಹಾಭಾರತ ಸೇರಿದಂತೆ ಆಸ್ತಿಕರ ನಂಬಿಕೆಗಳ ವಿರುದ್ಧ ಮಾತನಾಡುವ ಮೂಲಕ ವಿವಾದ ಸೃಷ್ಟಿಸುತ್ತಿದ್ದ ವಿಚಾರವಾದಿ ಕೆ.ಎಸ್.ಭಗವಾನ್ ದಿಢೀರ ಯೂಟರ್ನ್ ಹೊಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು ಮೈಸೂರಿನಲ್ಲಿ ಮಾತನಾಡಿದ ವಿಚಾರವಾದಿ ಕೆ.ಎಸ್.ಭಗವಾನ್​, ಆರ್ಟಿಕಲ್​ 370 ರದ್ದುಗೊಳಿಸಿರುವುದು ಹಾಗೂ ಕಾಶ್ಮೀರ್ ವಿಚಾರಕ್ಕೆ ಮೋದಿಯನ್ನು ಅಭಿನಂದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದ್ದಕ್ಕಿದ್ದಂತೆ ಮೋದಿಯವರನ್ನು ಹೊಗಳಿರುವ ಭಗವಾನ್​, ಆರ್ಟಿಕಲ್​ 370 ರದ್ದು ಮಾಡುವ ಮೂಲಕ ಮೋದಿ ದೇಶಕ್ಕೆ ಖುಷಿ ಕೊಟ್ಟಿದ್ದಾರೆ. 72 ವರ್ಷಗಳ ಸಂಕಷ್ಟಕ್ಕೆ ಮುಕ್ತಿನೀಡಿದ್ದು, ಒಳ್ಳೆಯ ನಿರ್ಧಾರ ಎಂದಿದ್ದಾರೆ.

ಮೋದಿ ಈ ನಿರ್ಧಾರದಿಂದ ಇಡೀ ದೇಶ ಒಂದೇ ಸಂವಿಧಾನದಡಿ ಬಂದಂತಾಗಿದೆ. ಇಂಥ ಮೋದಿ ಹೆಸರನ್ನು ಹೇಳಲು ನಂಗೆ ಸಂತೋಷ ಹಾಗೂ ಹೆಮ್ಮೆಯಾಗುತ್ತದೆ. ಜೈ ನರೇಂದ್ರ ಮೋದಿ ಎಂದು ಭಗವಾನ್​ ಪತ್ರಿಕಾ ಹೇಳಿಕೆ ಹೇಳಿದ್ದು, ಭಗವಾನ್​ ಹೇಳಿಕೆ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಇಷ್ಟಕ್ಕೂ ಭಗವಾನ್​ ಹೀಗ್ಯಾಕೆ ಯೂಟರ್ನ್​ ಹೊಡೆದರು ಎಂಬುದೇ ಅರ್ಥವಾಗದೇ ಓದುಗರು ಅಚ್ಚರಿಗೊಂಡಿದ್ದಾರೆ.

Comments are closed.